ಗಂಗಾವತಿಯಲ್ಲಿ ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಗೆ ನೇಮಕಗೊಂಡ ಸದಸ್ಯರಿಗೆ ಆದೇಶ ಪತ್ರ ವಿತರಿಸಲಾಯಿತು. ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡಗೌಡರ್, ಸಮಿತಿ ಸದಸ್ಯರಾದ ಆಗೋಲಿಯ ಹನುಮೇಶ ಡ್ಯಾಗಿ, ಹೊಸ್ಕೇರಾದ ಪ್ರಶಾಂತಕುಮಾರ, ಗಂಗಾವತಿಯ ಗೌಸಿಯಾಬೇಗಂ ಇದ್ದರು. 
ಜಿಲ್ಲೆ

ಇಲಾಖೆ ನಿಯಮದಂತೆ ಕರ್ತವ್ಯ ನಿರ್ವಹಿಸಿ

ಗಂಗಾವತಿ: ವಿಧಾನಸಭೆ ಕ್ಷೇತ್ರದ ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಗೆ ನೇಮಕಗೊಂಡ ನೂತನ ಸದಸ್ಯರಿಗೆ ತಾಲೂಕಾಡಳಿತ ಸೌಧದಲ್ಲಿ ಗುರುವಾರ ಆದೇಶ ಪತ್ರ ವಿತರಿಸಲಾಯಿತು.

ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಶಿಾರಸ್ಸಿನಂತೆ ಆಗೋಲಿಯ ಹನುಮೇಶ ಡ್ಯಾಗಿ, ಹೊಸ್ಕೇರಾದ ಪ್ರಶಾಂತಕುಮಾರ ಮತ್ತು ಗಂಗಾವತಿಯ ಗೌಸಿಯಾಬೇಗಂ ಸಮಿತಿಗೆ ನೇಮಕವಾಗಿದ್ದಾರೆ. ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ ಗೌಡರ್ ನೂತನ ಸದಸ್ಯರಿಗೆ ಆದೇಶ ಪತ್ರ ವಿತರಿಸಿ ಮಾತನಾಡಿದರು. ಸರ್ಕಾರದ ಆದೇಶದನ್ವಯ ಮೂವರು ಸದಸ್ಯರಿಗೆ ಅವಕಾಶ ನೀಡಿದ್ದು, ಇಲಾಖೆ ನಿಯಮದಂತೆ ಕರ್ತವ್ಯ ನಿರ್ವಹಿಸಬೇಕು. ಸಮಿತಿ ಸಭೆಗೆ ಕಡ್ಡಾಯವಾಗಿ ಭಾಗವಹಿಸಿ ಸೂಕ್ತ ಸಲಹೆ, ಸೂಚನೆ ನೀಡುವಂತೆ ತಿಳಿಸಿದರು.

ನಗರಸಭೆ ವಿಪಕ್ಷ ನಾಯಕ ಮನೋಹರಸ್ವಾಮಿ ಹಿರೇಮಠ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಡಾ.ಕೆ.ವಿ.ಬಾಬು, ಪಿಎಸ್ಸೆಸ್ಸೆನ್ ನಿರ್ದೇಶಕ ವಿಶ್ವನಾಥ ಮಾಲಿಪಾಟೀಲ್, ಕಾಂಗ್ರೆಸ್ ಮುಖಂಡರಾದ ದುರುಗೇಶ ನಾಯಕ, ಕೀರಪ್ಪ ಎಮ್ಮಿ, ರಮೇಶ ನಾಯಕ, ಯಮನಪ್ಪ ನವಲಿ, ಸನ್ನಿಕ್, ರಾಮುಕಿರಿಕಿರಿ, ಜೋಗದ ರವಿಚಂದ್ರ ನಾಯಕ ಇತರರಿದ್ದರು.