ಗಂಗಾವತಿ ತಾಲೂಕಾಡಳಿತ ಸೌಧದಲ್ಲಿ ಕಂದಾಯ ಇಲಾಖೆಯಿಂದ ನಿಜಶರಣ ಹಡಪದ ಅಪ್ಪಣ್ಣ ಜಯಂತಿ ಗುರುವಾರ ಆಚರಿಸಲಾಯಿತು. ತಹಸೀಲ್ದಾರ್ ಯು.ನಾಗರಾಜ್, ಗ್ರೇಡ್2 ತಹಸೀಲ್ದಾರ್ ಮಹಾಂತಗೌಡ ಗೌಡರ್, ಉಪತಹಸೀಲ್ದಾರ್ ಕೃಷ್ಣವೇಣಿ, ಪ್ರಕಾಶನಾಯ್ಕ, ಶಿರಸ್ತೇದಾರರಾದ ರವಿಕುಮಾರ ನಾಯಕ್ವಾಡಿ, ಶ್ರೀಕಂಠೇಶ ಇತರರಿದ್ದರು.  
ಜಿಲ್ಲೆ

ದಾರ್ಶನಿಕರ ಚಿಂತನೆ ಅಳವಡಿಸಿಕೊಳ್ಳಲಿ

ಕುರುವತ್ತಿ ಶ್ರೀಕಾಂತಪ್ಪ

ಗಂಗಾವತಿ: ನಗರದ ತಾಲೂಕಾಡಳಿತ ಸೌಧದಲ್ಲಿ ಕಂದಾಯ ಇಲಾಖೆಯಿಂದ ನಿಜಶರಣ ಹಡಪದ ಅಪ್ಪಣ್ಣ ಜಯಂತಿ ಗುರುವಾರ ಹಮ್ಮಿಕೊಳ್ಳಲಾಗಿತ್ತು.

ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿದ ತಹಸೀಲ್ದಾರ್ ಯು.ನಾಗರಾಜ್ ಮಾತನಾಡಿ, ಶರಣರು, ಸಂತರು ಮತ್ತು ದಾರ್ಶನಿಕರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದ್ದು, ವಚನಗಳ ಮೂಲಕ ಸಮಾಜ ತಿದ್ದುವ ಕೆಲಸ ಮಾಡಿದ ಹಡಪದ ಅಪ್ಪಣ್ಣನವರ ತತ್ವ ಸಂದೇಶಗಳು ಸಾರ್ವಕಾಲಿಕ ಮಾನ್ಯತೆ ಪಡೆದಿವೆ ಎಂದರು.

ಗ್ರೇಡ್2 ತಹಸೀಲ್ದಾರ್ ಮಹಾಂತಗೌಡ ಗೌಡರ್, ಉಪ ತಹಸೀಲ್ದಾರರಾದ ಕೃಷ್ಣವೇಣಿ, ಪ್ರಕಾಶನಾಯ್ಕ, ಶಿರಸ್ತೇದಾರರಾದ ರವಿಕುಮಾರ ನಾಯಕ್ವಾಡಿ, ಸುನೀಲ್ ಕುಲ್ಕರ್ಣಿ, ನಾಗರತ್ನಮ್ಮ, ಶ್ರೀಕಂಠೇಶ, ಗಾಯತ್ರಿ, ಶಿವಶಂಕರ, ಶಬ್ಬೀರ್, ಮಂಜುನಾಥ ಇತರರಿದ್ದರು.