ಜಿಲ್ಲೆ

ಅಂಜನಾದ್ರಿ ಬೆಟ್ಟದ ಬಳಿ ಕುಸ್ತಿ ಪಂದ್ಯಾವಳಿ: ದಾವಣಗೆರೆಯ ಜೂನಿಯರ್ ಮಹೇಶಗೌಡ, ಸೀನಿಯರ್ ಹನುಮಂತಪ್ಪಗೆ ಬೆಳ್ಳಿಗದೆ

ಗಂಗಾವತಿ: ಗ್ರಾಮೀಣ ಕಲೆಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳು ಮುಂದಾಗಬೇಕು ಎಂದು ತಾಪಂ ಮಾಜಿ ಸದಸ್ಯ ವೈ.ರಮೇಶ ಹೇಳಿದರು.

ತಾಲೂಕಿನ ಅಂಜನಾದ್ರಿ ಬೆಟ್ಟದ ಬಳಿ ಕಿಷ್ಕಿಂಧಾ ೌಂಡೇಷನ್ ಭಾನುವಾರ ಆಯೋಜಿಸಿದ್ದ ಅಂತರ್‌ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಮಾತನಾಡಿದರು. ವಿಜಯನಗರ ಸಾಮ್ರಾಜ್ಯದ ಆಡಳಿತಾವಧಿಯಲ್ಲಿ ಕುಸ್ತಿ ಕಲೆಗೆ ವಿಶೇಷ ಮಾನ್ಯತೆಯಿದ್ದು, ಕಿಷ್ಕಿಂಧಾ ಕ್ಷೇತ್ರದಲ್ಲಿ ಸಂಘಟನೆಗಳು ಮುಂದುವರಿಸಿಕೊಂಡು ಹೋಗಬೇಕಿದೆ ಎಂದರು.

ಹನುಮ ಜಯಂತಿ ಮತ್ತು ಆನೆಗೊಂದಿ ಶ್ರೀ ಲಕ್ಷ್ಮೀ ರಂಗನಾಥ ಜಾತ್ರೆ ನಿಮಿತ್ತ ಹಮ್ಮಿಕೊಂಡಿದ್ದ ಪಂದ್ಯಾವಳಿಯಲ್ಲಿ ಕೊಲ್ಲಾಪುರ, ಬೆಳಗಾವಿ, ದಾವಣಗೆರೆ, ಹೊಸಪೇಟೆ, ಹುಬ್ಬಳ್ಳಿ, ಮರಿಯಮ್ಮನಹಳ್ಳಿ ಸೇರಿ ಪುರುಷ ಮತ್ತು ಮಹಿಳಾ ವಿಭಾಗದಲ್ಲಿ 45ಕ್ಕೂ ಹೆಚ್ಚು ಕುಸ್ತಿ ಪಟುಗಳು ಭಾಗವಹಿಸಿದ್ದರು. ಜೂನಿಯರ್ ಹಾಗೂ ಸೀನಿಯರ್ ವಿಭಾಗದಲ್ಲಿ ಕ್ರಮವಾಗಿ ದಾವಣಗೆರೆಯ ಮಹೇಶಗೌಡ, ಹನುಮಂತಪ್ಪ ಮತ್ತು ಮಹಿಳಾ ವಿಭಾಗದಲ್ಲಿ ಬೆಳಗಾವಿಯ ಲಕ್ಷ್ಮೀ ಪಾಟೀಲ್ ಮೊದಲ ಸ್ಥಾನ ಪಡೆದಿದ್ದು, ಬೆಳ್ಳಿಗದೆ ನೀಡಿ ಸನ್ಮಾನಿಸಲಾಯಿತು.

ಕ್ರೀಡೆ ಆಯೋಜಿಸುವ ಉದ್ದೇಶ, ಪರಿಸರ ಸಂರಕ್ಷಣೆ ಮತ್ತು ಕಿಷ್ಕಿಂಧಾ ಕ್ಷೇತ್ರದಲ್ಲಿ ಗಿಡಗಳನ್ನು ಬೆಳೆಸುವ ಕುರಿತು ೌಂಡೇಷನ್ ನಿರ್ದೇಶಕ ದೇವೇಂದ್ರಪ್ಪ ಮಾಹಿತಿ ನೀಡಿದರು. ಜನಸೇನಾ ಸಂಸ್ಥೆ ಮುಖ್ಯಸ್ಥ ಎಚ್.ಸಂಗಮೇಶ ಸುಗ್ರೀವಾ, ಬಂಜಾರ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಲಕ್ಷ್ಮಣನಾಯ್ಕ, ೌಂಡೇಷನ್ ಮುಖ್ಯಸ್ಥೆ ಡಿ.ಸಿಂಧೂ, ಮುಖಂಡರಾದ ವೆಂಕಟರೆಡ್ಡಿ, ನರಸಪ್ಪ ನಾಯಕ, ಸಂತೋಷ, ವೆಂಕಟೇಶ ಇತರರಿದ್ದರು.