ಗಂಗಾವತಿ ತಾಲೂಕಿನ ಮರಳಿ ಗ್ರಾಪಂ ವ್ಯಾಪ್ತಿಯ ಪ್ರಗತಿನಗರದ 4ನೇ ವಾರ್ಡ್‌ನಲ್ಲಿ ಹೊಸದಾಗಿ ನಿರ್ಮಿಸಿರುವ ಅಂಗನವಾಡಿ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಲಾಯಿತು. ಗ್ರಾಪಂ ಅಧ್ಯಕ್ಷೆ ಹುಸೇನಮ್ಮ, ಸದಸ್ಯರಾದ ಕೆ.ರೋಹಿಣಿ ಕೊಟ್ರೇಶ, ನಜೀಯಾ ಮನ್ಸೂರಬೇಗ್, ವಿರೂಪಾಕ್ಷಪ್ಪ ಹೇಮಗುಡ್ಡ ಇತರರಿದ್ದರು.  
ಜಿಲ್ಲೆ

ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಅಂಗನವಾಡಿ ಪೂರಕ

ಕುರುವತ್ತಿ ಶ್ರೀಕಾಂತಪ್ಪ

ಗಂಗಾವತಿ: ತಾಲೂಕಿನ ಮರಳಿ ಗ್ರಾಪಂ ವ್ಯಾಪ್ತಿಯ ಪ್ರಗತಿನಗರದ 4ನೇ ವಾರ್ಡ್‌ನಲ್ಲಿ ಹೊಸದಾಗಿ ನಿರ್ಮಿಸಿರುವ ಅಂಗನವಾಡಿ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಲಾಯಿತು.

ಗ್ರಾಪಂ ಅಧ್ಯಕ್ಷೆ ಹುಸೇನಮ್ಮ ಮಾತನಾಡಿ, ಮಕ್ಕಳ ದೈಹಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಅಂಗನವಾಡಿ ಕೇಂದ್ರ ಪೂರಕವಾಗಿದ್ದು, ಮಕ್ಕಳನ್ನು ಮುತುವರ್ಜಿಯಿಂದ ಸಲಹುವ ಜವಾಬ್ದಾರಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಮೇಲಿದೆ. ಪೂರ್ವ ಪ್ರಾಥಮಿಕ ಶಿಕ್ಷಣಕ್ಕಾಗಿ ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಕಳುಹಿಸುವಂತೆ ಪಾಲಕರಿಗೆ ಮನವಿ ಮಾಡಿದರು.

ಪಿಡಿಒ ಬಸವರಾಜಗೌಡ ಮಾತನಾಡಿ, ಅಂಗನವಾಡಿ ಕೇಂದ್ರಕ್ಕೆ ಮೂಲ ಸೌಲಭ್ಯ ಒದಗಿಸಲಾಗುತ್ತಿದ್ದು, ಕಲಿಕೆ ಪೂರಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಗ್ರಾಪಂ ಸದಸ್ಯರಾದ ಕೆ.ರೋಹಿಣಿ ಕೊಟ್ರೇಶ, ನಜೀಯಾ ಮನ್ಸೂರಬೇಗ್, ವಿರೂಪಾಕ್ಷಪ್ಪ ಹೇಮಗುಡ್ಡ, ಶಿವಲಿಂಗಪ್ಪ, ಹೆಬ್ಬಾಳ ನಾಗರಾಜ, ತಾಪಂ ಮಾಜಿ ಅಧ್ಯಕ್ಷ ಮಹ್ಮದ್ ರಫಿ, ಮುಖಂಡರಾದ ಹನುಮಂತರಾಯ, ಗುಂಡಯ್ಯಸ್ವಾಮಿ ಹಿರೇಮಠ, ಮಹಾದೇವಪ್ಪ, ಅಯ್ಯಪ್ಪ, ನಾಗಭೂಷಣ ಸ್ವಾಮಿ, ಜ್ಞಾನೇಶ್ವರಸ್ವಾಮಿ, ರಾಜಾಸಾಬ, ಮಹಾಂತಪ್ಪ, ಶಿವನಪ್ಪ, ಎಂ.ಬಸಪ್ಪ, ಬಾಷಾ, ಶಿವಕುಮಾರ್ ಸ್ವಾಮಿ, ಆಸ್ೀ, ಎಸ್.ಬಸವರಾಜ್, ಎಸ್.ಅಮರೇಶ, ಮೇಲ್ವಿಚಾರಕಿ ಚಂದ್ರಕಲಾ, ಕಾರ್ಯಕರ್ತೆಯರಾದ ಜಯಮ್ಮ, ನಾಗರತ್ನಾ, ದುರಗಮ್ಮ, ನಾಗಮ್ಮ ಇತರರಿದ್ದರು.