ಗಂಗಾವತಿ: ಆನೆಗೊಂದಿ ಗ್ರಾಪಂ ಅಧ್ಯಕ್ಷೆಯಾಗಿ ಹುಲಿಗೆಮ್ಮ ಹೊನ್ನಪ್ಪ ನಾಯಕ ಗುರುವಾರ ಅವಿರೋಧ ಆಯ್ಕೆಯಾದರು. ಮಹಾದೇವಿ ಬಾಳಿಕಾಯಿ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಹುಲಿಗೆಮ್ಮ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಇವರ ಆಯ್ಕೆಯನ್ನು ಚುನಾವಣಾಧಿಕಾರಿ ತಹಸೀಲ್ದಾರ್ ಯು.ನಾಗರಾಜ್ ಅವಿರೋಧವೆಂದು ೋಷಿಸಿ, ಪ್ರಮಾಣ ಪತ್ರ ವಿತರಿಸಿದರು. ರಾಜವಂಶಸ್ಥೆ ಲಲಿತಾರಾಣಿ ರಾಯಲು, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಡಾ.ವೆಂಕಟೇಶ ಬಾಬು ಸೇರಿ ಬೆಂಬಲಿತ ಸದಸ್ಯರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.
ಚಿಕ್ಕಜಂತಕಲ್ ಗ್ರಾಪಂನ ಹೊಸಳ್ಳಿ ಒಂದು ಸದಸ್ಯ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಲಚಮಪ್ಪ ಹನುಮಂತಪ್ಪ ಭಜಂತ್ರಿ 334 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ. 949 ಮತಗಳಲ್ಲಿ 546 ಮತ ಚಲಾವಣೆಯಾಗಿದ್ದು, 11 ಮತಗಳು ತಿರಸ್ಕೃತಗೊಂಡಿವೆ. ಮರಳಿ ಗ್ರಾಪಂನ ಒಂದು ಸದಸ್ಯ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ವಿರೂಪಾಕ್ಷಪ್ಪ ವೀರಭದ್ರಪ್ಪ ಹೇಮಗುಡ್ಡ 324 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ. 765 ಮತಗಳ ಪೈಕಿ 507 ಮತಗಳು ಚಲಾವಣೆಯಾಗಿದ್ದು, 18 ಮತಗಳು ತಿರಸ್ಕೃತಗೊಂಡಿವೆ. ಆಯ್ಕೆಯನ್ನು ಚುನಾವಣಾಧಿಕಾರಿ ಯು.ನಾಗರಾಜ್ ೋಷಿಸಿದರು.