ಗಂಗಾವತಿ: ಯುವ ಸಮುದಾಯಕ್ಕೆ ಮಾದರಿಯಾಗಿದ್ದ ಚಿತ್ರನಟ ಪುನೀತ್ ರಾಜಕುಮಾರ ಸ್ಮರಣೆ ಬದುಕನ್ನು ರೂಪಿಸಲಿದೆ ಎಂದು ಗಾಯಕ ಪರಶುರಾಮ್ ದೇವರಮನಿ ಹೇಳಿದರು.
ನಗರದ ಕರೋಕೆ ಸ್ಟುಡಿಯೋದಲ್ಲಿ ಹವ್ಯಾಸಿ ಗಾಯಕರು ಮತ್ತು ಅಭಿಮಾನಿ ಬಳಗದಿಂದ ಸೋಮವಾರ ಹಮ್ಮಿಕೊಂಡಿದ್ದ ಪುನೀತ್ ಜನ್ಮದಿನೋತ್ಸವದಲ್ಲಿ ಮಾತನಾಡಿದರು. ಕಿಷ್ಕಿಂಧಾ ಭಾಗದ ಮೇಲೆ ಪುನೀತ್ ರಾಜಕುಮಾರಗೆ ಅಪಾರ ಗೌರವವಿತ್ತು. ಅಂಜನಾದ್ರಿ ಬೆಟ್ಟಕ್ಕೆ ಬಂದಿದ್ದರಲ್ಲದೇ, ಈ ಭಾಗದ ನೈಸರ್ಗಿಕ ಸಂಪತ್ತನ್ನು ವರ್ಣಿಸಿದ್ದರು. ತಾಲೂಕಿನ ಗ್ರಾಮೀಣ ಭಾಗದ ಶಾಲೆಗಳಿಗೆ ಕಲಿಕಾ ಸಾಮಾಗ್ರಿಗಳನ್ನು ವಿತರಿಸುವ ಮೂಲಕ ಮಾದರಿಯಾಗಿದ್ದರು ಎಂದರು.
ಪುನೀತ್ ಚಿತ್ರಗಳ ಹಾಡನ್ನು ಹಾಡುವ ಮೂಲಕ ಗಾಯಕರು ಗೌರವ ಸಲ್ಲಿಸಿದರು. ಮಾಧ್ಯಮ ಅಕಾಡೆಮಿ ಸದಸ್ಯ ಕೆ.ನಿಂಗಜ್ಜ, ಗಾಯಕರಾದ ಅಂಬಿಕಾ, ಸುಧಾ ಆನೆಗೊಂದಿ, ವಿಜಯಲಕ್ಷ್ಮೀ, ಗಿರಿಜಮ್ಮ, ಲಲಿತಮ್ಮ, ಹನುಮಂತಪ್ಪ ಹುಲಿಹೈದರ್, ಮಂಜುನಾಥ ಗೋಡಿನಾಳ, ವಿಕ್ರಂ ಬೆಂಗಳೂರು, ಛತ್ರಪ್ಪ ತಂಬೂರಿ, ವಿರೂಪಾಕ್ಷಪ್ಪ ಶಿರವಾರ, ಪೊಲ್ಕಲ್ ಯಲ್ಲಪ್ಪ, ಖಾಜಾಹುಸೇಬನ್, ಅಲಿ ಹಾಜಿ ಇತರರಿದ್ದರು.
ನೀಲಕಂಠೇಶ್ವರ ಕ್ಯಾಂಪ್: ಇಲ್ಲಿ ಶ್ರೀ ನೀಲಕಂಠೇಶ್ವರ ಸಾಂಸ್ಕೃತಿ ಕಲಾ ವೇದಿಕೆ ಮತ್ತು ಅಪ್ಪು ಅಭಿಮಾನಿ ಬಳಗದಿಂದ ಚಿತ್ರನಟ ಪುನೀತ್ ರಾಜಕುಮಾರ್ ಜನ್ಮದಿನ ನಿಮಿತ್ತ ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಗೋಪಿ ರಕ್ತ ಭಂಡಾರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶಿಬಿರದಲ್ಲಿ 52 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ನಂತರ ಸಾಮೂಹಿಕ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.
ಕುರಹಿನ ಶೆಟ್ಟಿ ಸಮಾಜದ ಮುಖಂಡರಾದ ಶ್ಯಾವಿ ತಿಪ್ಪಣ್ಣ, ಕುರಗೋಡು ಬಸವರಾಜಪ್ಪ, ಅಭಿಮಾನಿ ಬಳಗದ ಬಿ.ನಂಜುಂಡಪ್ಪ, ಐಲಿ ಬಸವರಾಜ, ಶ್ಯಾವಿ ಅಶೋಕ, ಚಂದ್ರಪ್ಪ ಐಲಿ, ಮಾರುತಿ ಐಲಿ, ಪೊಲ್ಕಲ್ ಮಲ್ಲಿಕಾರ್ಜುನ ಸಿ.ಮಹಾಲಕ್ಷ್ಮೀ, ನೇತ್ರಾ ರಮೇಶ, ಶಿರವಾರ ವಿರೂಪಾಕ್ಷಪ್ಪ, ಕಿರಣ ಐಲಿ ಇತರರಿದ್ದರು.