ಗಂಗಾವತಿ ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ ವಕೀಲರ ಸಂಘದ ತಾಲೂಕು ಘಟಕದ ಸದಸ್ಯರು ಬುಧವಾರ ಪ್ರತಿಭಟಿಸಿದರು. ಸಂಘದ ತಾಲೂಕಾಧ್ಯಕ್ಷ ಎಸ್.ಎನ್.ನಾಯಕ, ಕಾರ್ಯದರ್ಶಿ ಎಚ್.ಎಂ.ಮಂಜುನಾಥ, ಸದಸ್ಯರಾದ ಹುಸೇನಪ್ಪ ಹಂಚಿನಾಳ್, ರಾಜೇಶ್ವರಿ ಸುರೇಶ ಇತರರಿದ್ದರು.  
ಜಿಲ್ಲೆ

ತಪ್ಪಿಸ್ಥ ವಿರುದ್ಧ ಕಠಿಣ ಕ್ರಮವಾಗಲಿ

ಕುರುವತ್ತಿ ಶ್ರೀಕಾಂತಪ್ಪ

ಗಂಗಾವತಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರಿಗೆ ಶೂ ಎಸೆಯಲು ಯತ್ನಿಸುವ ಮೂಲಕ ಅವಮಾನಿಸಿರುವ ವಕೀಲನ ವಿರುದ್ಧ ಕ್ರಮಕ್ಕಾಗಿ ಒತ್ತಾಯಿಸಿ ವಕೀಲರ ಸಂಘದ ತಾಲೂಕು ಘಟಕದ ಸದಸ್ಯರು ನಗರದ ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ ಬುಧವಾರ ಪ್ರತಿಭಟಿಸಿದರು.

ಹಿರಿಯ ಮತ್ತು ಕಿರಿಯ ವಕೀಲರೊಂದಿಗೆ ಪ್ರತಿಭಟಿಸಿದ ಸಂಘದ ಪದಾಧಿಕಾರಿಗಳು, ಬೇಡಿಕೆ ಮನವಿಯನ್ನು ತಹಸೀಲ್ದಾರ್ ಯು.ನಾಗರಾಜ್‌ರಿಗೆ ಸಲ್ಲಿಸಿದರು.

ತಾಲೂಕು ಸಂಘದ ಕಾರ್ಯದರ್ಶಿ ಎಚ್.ಎಂ.ಮಂಜುನಾಥ ಮಾತನಾಡಿ, ಕೋರ್ಟ್ ಆವರಣದಲ್ಲಿ ಮುಖ್ಯ ನ್ಯಾಯಾಮೂರ್ತಿಗೆ ಆಗಿರುವ ಅವಮಾನ ಖಂಡನೀಯವಾಗಿದ್ದು, ವಕೀಲರೊಬ್ಬರ ಕೃತ್ಯದಿಂದ ನಾಗರಿಕ ಸಮುದಾಯವೇ ತಲೆತಗ್ಗಿಸುವಂತಾಗಿದೆ. ಇಂತಹ ಘಟನೆಯನ್ನು ವಕೀಲರ ಸಂಘ ಸಹಿಸಲ್ಲ.

ನ್ಯಾಯಮೂರ್ತಿ ಮತ್ತು ನ್ಯಾಯಾಂಗದೊಂದಿಗೆ ಒಗ್ಗಟ್ಟನಿಂದ ಸಂಘ ನಿಲ್ಲುತ್ತಿದ್ದು, ತಪ್ಪಿಸ್ಥ ವಕೀಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಸಂಘದ ತಾಲೂಕಾಧ್ಯಕ್ಷ ಎಸ್.ಎನ್.ನಾಯಕ, ಸದಸ್ಯರಾದ ಶಿವಪ್ಪ ಯಲಬುರ್ಗಿ, ಮಂಜುನಾಥ, ಹುಸೇನಪ್ಪ ಹಂಚಿನಾಳ್,ರಾಜೇಶ್ವರಿ ಸುರೇಶ, ಶರದ್ ದಂಡಿನ್, ವಿಷ್ಣುವರ್ಧನ ಇತರರಿದ್ದರು.