ರಾಣೆಬೆನ್ನೂರ: ದಡ್ಡಿಯಲ್ಲಿ ನಿಂತಿದ್ದ 1.50 ಲಕ್ಷ ರೂ. ಮೌಲ್ಯದ 17 ಕುರಿಗಳನ್ನು ಕಳ್ಳರು ದೋಚಿದ ಘಟನೆ ತಾಲೂಕಿನ ಗಂಗಾಪುರ ಗ್ರಾಮದಲ್ಲಿ ಬುಧವಾರ ಸಂಭವಿಸಿದೆ.
ಗ್ರಾಮದ ಕೋಟೆಪ್ಪ ಹರಿಜನ ಎಂಬುವರ ಕುರಿಗಳು ಕಳ್ಳತನವಾಗಿರುವುದು.
ಇವರು ತಮ್ಮ ಕುರಿಗಳನ್ನು ಮೇಯಿಸಿಕೊಂಡು ಬಂದು ದಡ್ಡಿಯಲ್ಲಿ ನಿಲ್ಲಿಸಿದ್ದರು. ಯಾರೋ ಖದೀಮರು ದಡ್ಡಿಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ ಕುರಿಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು, ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.