ಹಾನಗಲ್ಲ: ತಾಲೂಕಿನ ಮಾಸನಕಟ್ಟಿ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಗಂಗಪ್ಪ ಹಿರಗಪ್ಪನವರ ಅವಿರೋಧವಾಗಿ ಆಯ್ಕೆಯಾದರು.
ಇತ್ತೀಚೆಗೆ ಸದಸ್ಯರ ಅವಿಶ್ವಾಸ ಮಂಡನೆಯಿಂದ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಹೀಗಾಗಿ, ಶನಿವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಒಂದೇ ನಾಮಪತ್ರ ಸಲ್ಲಿಕೆಯಾದ ಕಾರಣ ಗಂಗಪ್ಪ ಹಿರಗಪ್ಪನವರ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ತಾಪಂ ಇಒ ಪರಶುರಾಮ ಪೂಜಾರ ಘೊಷಿಸಿದರು. ಪಿಡಿಒ ಕೃಷ್ಣಪ್ಪ ಆಲದಕಟ್ಟಿ, ಮಂಜುನಾಥ ಬಡಿಗೇರ ಸಹಾಯಕ ಚುನಾವಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು.
ನಂತರ ನಡೆದ ಸಮಾರಂಭದಲ್ಲಿ ನೂತನ ಅಧ್ಯಕ್ಷ ಗಂಗಪ್ಪ ಹಿರಗಪ್ಪನವರ ಅವರನ್ನು ಸನ್ಮಾನಿಸಲಾಯಿತು. ಬಿಜೆಪಿ ಪ್ರಮುಖ ಸಿದ್ದಲಿಂಗಪ್ಪ ಕಮಡೊಳ್ಳಿ, ಮಾಲತೇಶ ಸೊಪ್ಪಿನ, ಕಲ್ಯಾಣಕುಮಾರ ಶೆಟ್ಟರ, ಈರಣ್ಣ ನಿಂಬಣ್ಣನವರ, ಸಿದ್ದಪ್ಪ ಹಿರಗಪ್ಪನವರ, ಎಸ್.ಜಿ. ಹಿರೇಮಠ, ಸಿ.ಬಿ. ಪಾಟೀಲ, ಕಮಲವ್ವ ಮಾಳಗಿಮನಿ, ಸುಶೀಲಮ್ಮ ಹಳ್ಳಿಕೊಪ್ಪದಮಠ, ನೀಲವ್ವ ಮರೆಣ್ಣನವರ, ಕೊಟ್ರಮ್ಮ ಚಿಕ್ಕಮಠ, ಕುಸುಮವ್ವ ಅಂಬಲಿ, ಬಿ.ವಿ. ಪಾಟೀಲ, ಬಸವರಾಜ ಹಾದಿಮನಿ, ಗುಡ್ಡನಗೌಡ ಹೊಸಗೌಡ್ರ, ಶಿವನಗೌಡ ಪಾಟೀಲ, ಬಸನಗೌಡ ಪಾಟೀಲ, ಆರ್.ಜಿ. ಸವಣೂರ, ಸುರೇಶ ಲಚಮಣ್ಣನವರ ಇತರರು ಇದ್ದರು.