ಜಿಲ್ಲೆ

ಗಂಗಾಧರಗೆ ಸ್ವಯಂಸೇವಕ ಪ್ರಶಸ್ತಿ

ಮುನವಳ್ಳಿ: ಪಟ್ಟಣದ ಜೆ.ಎಸ್​.ಪಿ. ಸಂದ ಅಜ್ಜಪ್ಪ ಗಡಮಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿ ಗಂಗಾಧರ ಕುರಬಗಟ್ಟಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆ (ಎನ್​ಎಸ್​ಎಸ್​) ಟಕ ಬೆಂಗಳೂರು ಅವರ 2022&23ನೇ ಸಾಲಿನ ಅತ್ಯುತ್ತಮ ರಾಜ್ಯ ಎನ್​ಎಸ್​ಎಸ್​ ಸ್ವಯಂಸೇವಕ ಪ್ರಶಸ್ತಿ ಲಭಿಸಿದೆ. ಮಾ.17ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.