ಜಿಲ್ಲೆ

ಡ.ಸ. ಹಡಗಲಿ ಗ್ರಾ.ಪಂ ಅಧ್ಯಕ್ಷರಾಗಿ ಗಂಗಾಧರ

ನರೇಗಲ್ಲ: ಸಮೀಪದ ಡ.ಸ ಹಡಗಲಿ ಗ್ರಾಮ ಪಂಚಾಯಿತಿ ಎರಡನೇ ಅವಧಿಗೆ ಅಧ್ಯಕ್ಷರಾಗಿ ಗಂಗಾಧರ ಕಮ್ಮಾರ ಉಪಾಧ್ಯಕ್ಷೆಯಾಗಿ ರೇಣವ್ವ ಕಂಪ್ಲಿ ಮಂಗಳವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುಣಾವಣಾಧಿಕಾರಿ ರವೀಂದ್ರಗೌಡ ಪಾಟೀಲ ತಿಳಿಸಿದ್ದಾರೆ.

ಡ.ಸ. ಹಡಗಲಿ ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರು ನನ್ನ ಮೇಲೆ ವಿಶ್ವಾಸವಿಟ್ಟು ಅಧ್ಯಕ್ಷನನ್ನಾಗಿ ಮಾಡಿದ್ದಾರೆ. ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸುತ್ತೇನೆ. ಡ.ಸ. ಹಡಗಲಿ ಹಾಗೂ ಗುಜಮಾಗಡಿ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಗ್ರಾ.ಪಂ ಅಧ್ಯಕ್ಷ ಗಂಗಾಧರ ಕಮ್ಮಾರ ಹೇಳಿದರು.

ಮೀನಾಕ್ಷಮ್ಮ ಚಲವಾದಿ, ಲಲಿತಾ ಹುಲ್ಲೂರ ಶಿವಗಂಗಮ್ಮಾ ತಳವಾರ, ಎನ್.ಸಿ. ಪಾಟೀಲ, ಎಂ.ಆರ್. ಹಳ್ಳೂರ, ಸಿ.ಬಿ. ಕಳಕಾಪೂರ. ಶರಣಪ್ಪ ಬೇವಿನಕಟ್ಟಿ, ಪಡಿಯಪ್ಪ ಬೇಲೇರಿ, ಎಸ್..ಆರ್. ಕಳಕಾಪೂರ, ಮಲ್ಲಪ್ಪ ಮಲ್ಲಾಪೂರ, ಶರಣಪ್ಪ ಗವಾರಿ, ಸಿದ್ದಣ್ಣ ಹೂಗಾರ ಸೇರಿದಂತೆ ಇತರರಿದ್ದರು.