ಜಿಲ್ಲೆ

ಸೇವೆಯಿಂದ ಗಂಗಾಧರಸ್ವಾಮಿ ಬಿಡುಗಡೆ : ವಿಜಯವಾಣಿಯಲ್ಲಿ ವರದಿ ಬೆನ್ನಲ್ಲೇ ಪಾಲಿಕೆ ಕ್ರಮ

satishvml

ಬೆಂಗಳೂರು: ವರ್ಗಾವಣೆಯಾದರೂ ಠಿಕಾಣಿ ಹೂಡಿದ್ದ ಅಧಿಕಾರಿ ಬಗ್ಗೆ ವಿಜಯವಾಣಿಯಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ಬಿಬಿಎಂಪಿ ಸೇವೆಯಿಂದ ಬಿಡುಗಡೆ ಮಾಡಲಾಗಿದೆ.

ಬಿಬಿಎಂಪಿ ತೋಟಗಾರಿಕೆ ವಿಭಾಗದ ಉಪ ನಿರ್ದೇಶಕ ಜಿ. ಗಂಗಾಧರಸ್ವಾಮಿ ಅವರನ್ನು ತೋಟಗಾರಿಕೆ ಇಲಾಖೆಯ ಕ್ಷೇತ್ರ ಮತ್ತು ನರ್ಸರಿ, ಲಾಲ್‌ಬಾಗ್ ಉಪನಿರ್ದೇಶಕ ಸ್ಥಾನಕ್ಕೆ ಸರ್ಕಾರ ವರ್ಗಾವಣೆ ಮಾಡಿತ್ತು. ಆದರೆ, ಇವರು ಪ್ರಭಾವ ಬಳಸಿಕೊಂಡು ಪಾಲಿಕೆಯಲ್ಲಿಯೇ ಮುಂದುವರಿದಿದ್ದರು.

ಈ ಕುರಿತು ‘ವರ್ಗವಾದರೂ ಪಾಲಿಕೆ ಬಿಡದ ಉಪನಿರ್ದೇಶಕ’ ಎಂಬ ತಲೆಬರಹದಡಿ ನ.5 ರಂದು ವಿಜಯವಾಣಿಯಲ್ಲಿ ವರದಿ ಪ್ರಕಟಿಸಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಬಿಬಿಎಂಪಿ ಮಂಗಳವಾರ (ನ.10) ಸೇವೆಯಿಂದ ಬಿಡುಗಡೆ ಮಾಡಿದೆ. ಈಗ ಪಾಲಿಕೆ ತೋಟಗಾರಿಕೆ ವಿಭಾಗದ ಉಪ ನಿರ್ದೇಶಕರ ಸ್ಥಾನಕ್ಕೆ ಎಂ.ಆರ್. ಚಂದ್ರಶೇಖರ್ ನೇಮಕವಾಗಿದ್ದಾರೆ.