ಜಿಲ್ಲೆ

ಗಂಗಾ ಕ್ರೆಡಿಟ್ ಸೊಸೈಟಿ ಸಭೆ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಗಂಗಾ ಕೋ ಆಪ್ ಕ್ರೆಡಿಟ್ ಸೊಸೈಟಿಯ 28ನೇ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಗರದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಎಚ್.ಎಸ್. ನಾಯ್ಕೋಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೊಸೈಟಿಯು 15 ಲಕ್ಷ ರೂ. ಲಾಭ ಮಾಡಿದೆ. ಸದಸ್ಯರಿಗೆ ಶೇ. 10ರಷ್ಟು ಡಿವಿಡೆಂಡ್ ಘೋಷಣೆ ಮಾಡಲಾಗಿದೆ ಎಂದರು.

ಅತಿಥಿಯಾಗಿದ್ದ ವಿ.ಜಿ. ಕುಲಕರ್ಣಿ ಮಾತನಾಡಿ, ಸಾಲ ಪಡೆದ ಸದಸ್ಯರು ಸಕಾಲಕ್ಕೆ ಮರುಪಾವತಿ ಮಾಡಬೇಕು. ಇದರಿಂದ ಸೊಸೈಟಿ ಬೆಳವಣಿಗೆಗೆ ಅನುಕೂಲವಾಗಲಿದೆ ಎಂದರು.

ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ನೀಡಲಾಯಿತು.

ಬಸವರಾಜ ರ್ಗುಕಿ, ನಿರ್ದೇಶಕರಾದ ಬಿ.ಎಲ್. ತಮ್ಮಣ್ಣಯ್ಯ, ಆರ್.ಎಂ. ಹರಪನಹಳ್ಳಿ, ಪಿ.ಡಿ. ನಾಟಿಕರ, ಸಿ.ಜಿ. ಗಂಗಪ್ಪನವರ, ಬಿ.ಎನ್. ತಹಸೀಲ್ದಾರ್, ಬಿ.ಎಚ್. ಅಡಿವೆಣ್ಣವರ, ಇತರರು ಉಪಸ್ಥಿತರಿದ್ದರು.

ಎನ್.ಎಂ. ಮಡ್ಡೇರ ಸ್ವಾಗತಿಸಿದರು. ಎಲ್.ಜಿ. ಅಂಬಿಗೇರ ಪರಿಚಯಿಸಿದರು. ವೈ.ಆರ್. ಗೇಟಿಯವರ ಕಾರ್ಯಕ್ರಮ ನಿರೂಪಿಸಿದರು. ಎಸ್.ಎಂ. ದೇವಗಿರಿ ವಂದಿಸಿದರು.