ಅಳವಂಡಿ ಗ್ರಾಮದಲ್ಲಿ ಶ್ರೀಎಲ್ಲಮ್ಮದೇವಿ ಉತ್ಸವಮೂರ್ತಿ ಮೆರವಣಿಗೆ ಹಾಗೂ ಗಂಗಾಪೂಜೆ ಸಲ್ಲಿಕೆ ಕಾರ್ಯಕ್ರಮ ನಡೆಯಿತು. ಪ್ರಮುಖರಾದ ಜೋಗಮ್ಮ ಪಿಂಜಾರ, ಶರಣಪ್ಪ, ವೀರಭದ್ರಯ್ಯ, ತಿಪ್ಪಣ್ಣ, ಡಿ.ಜಿ.ಲಕ್ಕನಗೌಡರ, ಬಿ.ಎಸ್.ತೊಂಡಿಹಾಳ, ಪಕೀರಪ್ಪ ಇದ್ದರು. 
ಜಿಲ್ಲೆ

ಅಳವಂಡಿಯಲ್ಲಿ ಶ್ರೀ ಎಲ್ಲಮ್ಮದೇವಿ ಉತ್ಸವ ಮೂರ್ತಿ ಮೆರವಣಿಗೆ ಅದ್ದೂರಿ

Gangavati - Mohan Kumar H R

ಅಳವಂಡಿ: ಗ್ರಾಮದ ಶ್ರೀ ಎಲ್ಲಮ್ಮದೇವಿ ಉತ್ಸವಮೂರ್ತಿ ಮೆರವಣಿಗೆ ಹಾಗೂ ಗಂಗಾಪೂಜೆ ಸಲ್ಲಿಕೆ ಕಾರ್ಯಕ್ರಮ ಸಕಲ ವಾದ್ಯ ಮೇಳದೊಂದಿಗೆ ಗುರುವಾರ ವಿಜೃಂಭಣೆಯಿಂದ ನಡೆಯಿತು.

ಹೂಗಳಿಂದ ಅಲಂಕರಿಸಿದ ಶ್ರೀ ಎಲ್ಲಮ್ಮದೇವಿ ಉತ್ಸವಮೂರ್ತಿ ಮೆರವಣಿಗೆ ದೇವಸ್ಥಾನದಿಂದ ಆರಂಭವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯ ಮೇಳದೊಂದಿಗೆ ಸಂಚರಿಸಿ ಹಿರೇಹಳ್ಳಕ್ಕೆ ತೆರಳಿ ಗಂಗಾಪೂಜೆ ಸಲ್ಲಿಸಲಾಯಿತು.

ನಂತರ ಮೆರವಣಿಗೆ ಮೂಲಕ ದೇವಸ್ಥಾನ ತಲುಪಿತು. ವಿಶೇಷ ಪೂಜೆ ಪುನಸ್ಕಾರಗಳು ನಡೆದ ಬಳಿಕ ಅನ್ನದಾಸೋಹ ಸೇವಾ ಕಾರ್ಯಕ್ರಮ ನಡೆಯಿತು.

ಪ್ರಮುಖರಾದ ಜೋಗಮ್ಮ ಪಿಂಜಾರ, ತಿಪ್ಪಣ್ಣ ತಳಬಾಳ, ಶರಣಪ್ಪ ಜಡಿ, ವೀರಭದ್ರಯ್ಯ ಶಿರೂರಮಠ, ಡಿ.ಜಿ.ಲಕ್ಕನಗೌಡರ, ಬಿ.ಎಸ್.ತೊಂಡಿಹಾಳ, ಪಕೀರಪ್ಪ ಕಿಲ್ಲೇದ, ಗವಿಸಿದ್ದಪ್ಪ ಮೇಟಿ, ರಾಜು ಗೊರ್ಲೆಕೊಪ್ಪ, ಪರಶು ಮಂಡಲಗೇರಿ, ನಿಂಗಪ್ಪ ನೀಲಣ್ಣವರ, ಕಾಶಿಮ ಮಠದ, ಕಾಶಿಮ ಗಡಾದ, ಬಾಷು ಗಡಾದ, ನಾಗರಾಜ ಉಪ್ಪಾರ, ಉಮೇಶ ಹಟ್ಟಿ ಹಾಗೂ ಭಕ್ತರು ಇದ್ದರು.