ಜಿಲ್ಲೆ

ಅಮ್ಮನಹಳ್ಳದಲ್ಲಿ ಭಕ್ತರಿಂದ ಗಂಗಾಪೂಜೆ

Mysuru - Desk - Ravikumar

 ಅರಸೀಕೆರೆ ಗ್ರಾಮಾಂತರ: ತಾಲೂಕಿನ ಹಾರನಹಳ್ಳಿ ಸಮೀಪದ ಕೊಡಮ್ಮ ದೇವಿ ಮೂಲ ಸನ್ನಿಧಿ ಅಮ್ಮನ ಹಳ್ಳದಲ್ಲಿ ಶ್ರಾವಣ ಮಾಸದ ಅಂಗವಾಗಿ ಗಂಗಾ ಪೂಜೆ ಕಾರ್ಯಕ್ರಮ ಸುಹಾಸಿನಿಯರು ಹಾಗೂ ಭಕ್ತರಿಂದ ವೈಭವಪೊರಿತವಾಗಿ ಬುಧವಾರ ನಡೆಯಿತು.

ಶ್ರೀ ಕೊಡಮ್ಮ ದೇವಿ ಶ್ರೀ ದೂತರಾಯಸ್ವಾಮಿ ಶ್ರೀ ವೀರಭದ್ರಸ್ವಾಮಿ ಶ್ರೀ ಕೆಂಚರಾಯ ಸ್ವಾಮಿ ಅವರಿಗೆ ವಿಶೇಷ ಹೂವಿನಿಂದ ಅಲಂಕಾರ ಮಾಡಿ ಹಳ್ಳದ ಸಮೀಪ ದೇವರನ್ನು ಗದ್ದಿಗೆಗೆ ಕೂರಿಸಿದ ನಂತರ ಅಮ್ಮನ ಹಳ್ಳದಗಂಗೆಗೆ ಗಂಗಾ ಪೂಜೆ ಮಾಡಿದರು. ಮಹಿಳೆಯರು ಮಂಗಳದ್ರವ್ಯಗಳಿಂದ ಪೂಜಿಸಿದ ನಂತರ ಮಹಾಮಂಗಳಾರತಿ ನಡೆಯಿತು. ಹಾರನಹಳ್ಳಿ ಗ್ರಾಮಸ್ಥರು, ದೇವಿಯ ಭಕ್ತರು ಅಮ್ಮನ ಹಳ್ಳ ಪೂಜಾ ಕೈಂಕರ್ಯಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದು ಧನ್ಯರಾದರು.