ಜಿಲ್ಲೆ

ನುಚ್ಚಂಬ್ಲಿ ಬಾವಿಯಲ್ಲಿ ಗಂಗಾ ಪೂಜೆ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಸಾರ್ವಜನಿಕ ಗಣೇಶ ವಿಸರ್ಜನೆ ಹಿನ್ನೆಲೆಯಲ್ಲಿ ಇಲ್ಲಿನ ನುಚ್ಚಂಬ್ಲಿ ಬಾವಿಯ ಗಂಗಾ ಪೂಜೆಯನ್ನು ಭಾನುವಾರ ನೆರವೇರಿಸಲಾಯಿತು.
ಮೇಯರ್​ ರಾಮಪ್ಪ ಬಡಿಗೇರ, ಪಾಲಿಕೆ ಸದಸ್ಯ ಈರೇಶ ಅಂಚಟಗೇರಿ ಪೂಜೆ ನೆರವೇರಿಸಿದರು. ನಗರದ ಸಾರ್ವಜನಿಕ ಹಾಗೂ ಮನೆಗಳಲ್ಲಿ ಪ್ರತಿಷ್ಠಾಪಿಸಿದ 200ಕ್ಕೂ ಹೆಚ್ಚು ಗಣೇಶ ಮೂತಿರ್ಗಳನ್ನು ಈ ಭಾವಿಯಲ್ಲಿ ವಿಸರ್ಜನೆ ಮಾಡಲಾಗುತ್ತಿದೆ. ಹೀಗಾಗಿ ಭಾವಿಯಯನ್ನು ಸ್ವಚ್ಛಗೊಳಿಸಿ ಗಂಗಾ ಪೂಜೆ ನೆರವೇರಿಸಿ 5, 7 ಹಾಗೂ 11 ದಿನಗಳ ಗಣಪತಿ ವಿಸರ್ಜನೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ಪಾಲಿಕೆ ಸದಸ್ಯರಾದ ಶಂಕರ ಶೇಳಕೆ, ಶಂಭುಗೌಡ ಸಾಲಮನಿ, ರತ್ನಾಬಾಯಿ ನಾಝರೆ, ಮುಖಂಡರಾದ ಪುಷ್ಪ ನವಲಗುಂದ, ತಾನಾಜಿ ರೋಖಡೆ, ಸುಮಿತ್ರಾ ಬಡಿಗೇರ, ರಾಕೇಶ ನಾಝರೆ, ಸ್ಥಳಿಯರು, ಇತರರು ಇದ್ದರು.