ಕಾರ್ಕಳ: ಪ್ರತೀ ವರ್ಷ ಗಣೇಶೋತ್ಸವ ಸಮಿತಿ ಗಣೇಶ ಹಬ್ಬಗಳನ್ನು ಭಕ್ತಿ-ಭಾವದಿಂದ ಆಚರಿಸಿಕೊಂಡು ಬರುವುದು ಸರ್ವೇ ಸಾಮಾನ್ಯ. ಸಾರ್ವಜನಿಕರಿಗೆ, ವೈದ್ಯಕೀಯ, ಶೈಕ್ಷಣಿಕ, ಕ್ರೀಡಾ ಕ್ಷೇತ್ರಕ್ಕೆ ಆರ್ಥಿಕ ನೆರವು ನೀಡುತ್ತಾ ಗಣೇಶ ಹಬ್ಬ ಆಚರಿಸಿಕೊಂಡು ಬಂದಿರುವ ಕಾರ್ಕಳ ಬಸ್ ಸ್ಟಾೃಂಡ್ ಗಣೇಶೋತ್ಸವ ಸಮಿತಿ ಕಾರ್ಯ ಶ್ಲಾಘನೀಯ ಎಂದು ಕಾರ್ಕಳ ಪುರಸಭೆ ಅಧ್ಯಕ್ಷ ಯೋಗಿಶ್ ದೇವಾಡಿಗ ಹೇಳಿದರು.
ಕಾರ್ಕಳ ರಾಧಾಕೃಷ್ಣ ಸಭಾಭವನದಲ್ಲಿ ಕಾರ್ಕಳ ಬಸ್ ಸ್ಟಾೃಂಡ್ ಗಣೇಶೋತ್ಸವ ಸಮಿತಿ ವತಿಯಿಂದ ಏಳು ಜನರಿಗೆ 60,000 ರೂ. ಆರ್ಥಿಕ ನೆರವು ವಿತರಿಸಿ ಮಾತನಾಡಿದರು. ಸಾರ್ವಜನಿಕರು ಭಕ್ತಿಯಿಂದ ನೀಡಿದ ಹಣದ ಸದುಪಯೋಗವಾದರೆ ಮಾತ್ರ ಅದು ದೇವರಿಗೆ ಸಲ್ಲುತ್ತದೆ. ಜತೆಗೆ ಆಚರಣೆಗಳಿಗೂ ಅರ್ಥ ಬರುತ್ತದೆ. ದೇಣಿಗೆಯಾಗಿ ಬಂದ ಉಳಿಕೆ ಮೊತ್ತ ಭಕ್ತರಿಗೆ ಸಹಾಯದ ರೂಪದಲ್ಲಿ ಹಿಂತಿರುಗಿಸುವ ಮೂಲಕ ಸಮಿತಿ ಇತರರಿಗೂ ಮಾದರಿಯಾಗಿದ್ದಾರೆ. ಈ ಪುಣ್ಯದ ಕೆಲಸ ಹೀಗೆಯೇ ಮುಂದುವರಿಯಲಿ ಎಂದು ಹಾರೈಸಿದರು.
ಸಮಿತಿ ಗೌರವಾಧ್ಯಕ್ಷ ಜಗದೀಶ್ ಮಲ್ಯ ಸಹಕಾರ ನೀಡಿದ ಸಾರ್ವಜನಿಕರಿಗೆ ಕೃತಜ್ಞತೆ ಸಲ್ಲಿಸಿದರು. ಸ್ಥಾಪಕಾಧ್ಯಕ್ಷ ಶುಭದರಾವ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಮಿತಿ ಅಧ್ಯಕ್ಷ ಸುರೇಶ್ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಸದಸ್ಯರಿಗೆ ನಡೆದ ವಿವಿಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಜ್ಯೋತಿಷಿ ವಾದಿರಾಜ್ ಆಚಾರ್ಯ, ಗೌರವ ಸಲಹೆಗಾರ ಆದಿರಾಜ ಅಜಿರಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಇಕ್ಬಾಲ್ ಅಹ್ಮದ್ ನಿರೂಪಿಸಿದರು. ರಾಜಾರಾಮ್ ಕಾಮತ್ ವಂದಿಸಿದರು.