ನೆಲಮಂಗಲ ನಗರಸಭೆ ಕಚೇರಿ ಆವರಣದಲ್ಲಿ ಪ್ರತಿಷ್ಠಾಪನೆ ಮಾಡಿರುವ ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಲಾಯಿತು. ನಗರಸಭೆ ಉಪಾಧ್ಯಕ್ಷ ಆನಂದ್​, ಸ್ಥಾಯಿ ಸಮಿತಿ ಅಧ್ಯಕ್ಷ ಪದ್ಮನಾಬ್​ಪ್ರಸಾದ, ನಿಕಟಪೂರ್ವ ಅಧ್ಯಕ್ಷೆ ಪೂರ್ಣಿಮಾ ಸುಗ್ಗರಾಜು, ಸದಸ್ಯ ಸುನಿಲ್​ಮೂಡ್​, ಶಿವಕುಮಾರ್​, ಗಂಗಾಧರ್​ರಾವ್​, ಹೆಚ್ಚುವರಿ ಸದಸ್ಯ ರಾಮಮೂರ್ತಿ, ಪೌರಾಯುಕ್ತ ಗಂಗಾಧರ್​, ಮುಖಂಡ ವಸಂತ್​, ನಗರಸಭೆ ಸಿಬ್ಬಂದಿ ಪ್ರವಿಣ್​, ಮಂಜುನಾಥ್​, ನಾಗರಾಜು, ರಂಜನ್​ ಇದ್ದರು. 
ಜಿಲ್ಲೆ

ಜಿಲ್ಲಾದ್ಯಂತ ಗಣೇಶೋತ್ಸವ ಸಂಭ್ರಮ

ಬೆಂಗಳೂರು ಗ್ರಾಮಾಂತರ ಡೆಸ್ಕ್

ನೆಲಮಂಗಲ : ಭಾರತದ ಸ್ವತಂತ್ರ$್ಯ ಚಳವಳಿ ಕಾಲದಿಂದಲೂ ಬಹಳ ಮಹತ್ವ ಪಡೆದುಕೊಂಡು ಬಂದಿರುವ ಸಾಂಸತಿಕ ಹಾಗೂ ಐತಿಹಾಸಿಕ ಗಣೇಶ ಚತುರ್ಥಿಯನ್ನು ನಗರ ಸೇರಿ ತಾಲೂಕಿನಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಗಣೇಶ ಹಬ್ಬಕ್ಕೂ ಮುನ್ನವೇ ಸಕಲ ತಯಾರಿ ಮಾಡಿಕೊಂಡಿದ್ದ ಯುವ ಪಡೆ ನಗರದ ವಿವಿಧ ಬಡಾವಣೆಗಳ ಜತೆಗೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ವಿದ್ಯುತ್​ ದೀಪಾಲಂಕೃತವಾದ ವೇದಿಕೆಗಳಲ್ಲಿ ವಿವಿಧ ಗಾತ್ರ, ಎತ್ತರದ ಜತೆಗೆ ವಿಭಿನ್ನ ಮಾದರಿಯ ಗಣೇಶನ ಮೂರ್ತಿಗಳನ್ನು ಶಾಸೊಕ್ತವಾಗಿ ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದಾರೆ. ಅದರಲ್ಲೂ ಶ್ರೀಕೃಷ್ಣನಂತೆ ಕೊಳಲು ಊದುತ್ತಾ ಗೋವಿನ ಜತೆಯಲ್ಲಿರುವ ಗಣಪ, ಸುಬ್ರಮಣ್ಯನಂತೆ ನವಿಲಿನ ಮೇಲೆ ಕುಳಿತಿರುವ ಗಣಪ, ನಾಟ್ಯಮಾಡುತ್ತಿರುವ ಗಣಪನ ಮೂರ್ತಿ ಭಕ್ತರ ಗಮನ ಸೆಳೆಯುತ್ತಿವೆ.

ನಗರದ ಪರಮಣ್ಣಬಡಾವಣೆ, ಸುಭಾಷ್​ ನಗರ, ಧಾದಫಿರ್​, ಜಯನಗರ, ರಾಯನ್​ ನಗರ, ಕೋಟೆಬೀದಿ, ಅಡೇಪೇಟೆ, ಕೆಎಸ್​ ಆರ್​ಟಿಸಿ, ಚೆನ್ನಪ್ಪಬಡಾವಣೆ ಸೇರಿ ತಾಲೂಕಿನ ಬೂದಿಹಾಲ್​, ಬಾವಿಕೆರೆ, ಹಂಚೀಪುರ, ಯಂಟಗಾನಹಳ್ಳಿ, ಯಲಚಗೆರೆ ಮತ್ತು ಗ್ರಾಮಪಂಚಾಯಿತಿ ಕಚೇರಿ ಮುಂಭಾಗದಲ್ಲಿ ವಿವಿಧ ಸಂಘ ಸಂಸ್ಥೆಗಳ ಹೆಸರಿನಲ್ಲಿ ಪ್ರತಿಷ್ಠಾಪಿಸಿರುವ ಬೃಹತ್​ ಗಾತ್ರದ ಗಣೇಶ ಮೂರ್ತಿಗಳನ್ನು 3 ರಿಂದ 5 ದಿನಗಳ ಕಾಲ ಪೂಜಿಸಲಿದ್ದಾರೆ.

ತಮಟೆಗೆ ಬಾರಿ ಬೇಡಿಕೆ : ಗಣೇಶ ವಿಸರ್ಜನೆ ಮಾಡುವ ದಿನದಂದು ಗಣೇಶನನ್ನು ನಗರ ಹಾಗೂ ಬಡಾವಣೆ ಸೇರಿ ಗ್ರಾಮದಲ್ಲಿ ಅದ್ದೂರಿ ಮೆರವಣಿಗೆ ಮಾಡಲಿದ್ದು, ಕೆಲವರು ಜಾನಪದ ಕಲಾತಂಡಗಳನ್ನು ಕರೆಸಲಿದ್ದಾರೆ. ಅದರೆ ತಾಲೂಕಿನ ಬಹುತೇಕ ಮಂದಿ ಗಣೇಶ ವಿಸರ್ಜನೆಯ ಮೆರವಣಿಗೆ ತಮಟೆ ವಾದನ ಮಾಡುವ ಕಲಾವಿದರನ್ನು ಕರೆಸಿಲಿದ್ದು, ಪ್ರತಿ ವರ್ಷದಂತೆ ಈ ವರ್ಷವೂ ತಮಟೆಗೆ ಬಾರಿ ಬೇಡಿಕೆ ಹೆಚ್ಚಾಗಿದೆ.

ವಿವಿಧ ಸ್ಪರ್ಧೆ ಆಯೋಜನೆ : ಗಣೇಶ ಪ್ರತಿಷ್ಠಾಪಿಸಿದ್ದ ಸಂಘದವರು ಪ್ರಸಿದ್ಧ ವಾದ್ಯಗೊಷ್ಠಿ ಆಯೋಜನೆ ಜತೆಗೆ ಮಹಿಳೆಯರು ಮತ್ತು ಮಕ್ಕಳಿಗಾಗಿ ರಂಗೋಲಿ, ಗೀತಗಾಯನ, ನೃತ್ಯ ದಂತದ ಸಾಂಸತಿಕ ಹಾಗೂ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಿ ಬಹುಮಾನ ವಿತರಿಸಿದರು.

ನಗರಸಭೆ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ : ನಗರಸಭೆ ಅಧಿಕಾರಿಗಳು, ಸಿಬ್ಬಂದಿ ಸೇರಿ ಪೌರ ಕಾರ್ಮಿಕರು ಎಲ್ಲ್ಲರೂ ಒಗ್ಗೂಡಿಸಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ನಗರಸಭೆ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ ಹಿನ್ನೆಲೆ ವಿಶೇಷ ಪೂಜೆ ಸಲ್ಲಿಸಿದ್ದ ಬಳಿಕ ನಗರಸಭೆ ಅಧ್ಯಕ್ಷ ಎನ್​.ಗಣೇಶ್​ ಗಣೇಶೋತ್ಸವಕ್ಕೆ ಚಾಲನೆ ನೀಡಿದರು.