ಮಂಗಳೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ದಕ್ಷಿಣ ಕನ್ನಡ ಜಿಲ್ಲಾ ಹಾಪ್‌ಕಾಮ್ಸ್ ನೌಕರರು ಮತ್ತು ಸಾರ್ವಜನಿರು ವತಿಯಿಂದ 35 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ನಗರದ ಕರಂಗಲಪಾಡಿ ಗಣೇಶ ಮಂಟಪದಲ್ಲಿ ಸೆ.19 ರಿಂದ 21 ತನಕ ಜರುಗಲಿದೆ.
ಸೆ.19 ರಂದು ಬೆಳಗ್ಗೆ 8 ರಿಂದ ಗಣಹೋಮ, ವಿಗ್ರಹ ಪ್ರತಿಷ್ಠಾಪನೆ, ಮಧ್ಯಾಹ್ನ ಮಹಾಪೂಜೆ, ಸಂಜೆ 6 ರಿಂದ ಸಂಗೀತ ಕಾರ್ಯಕ್ರಮ, ಮಹಾಪೂಜೆ, ನೃತ್ಯ ವೈಭವ ನಡೆಯಲಿದೆ.
ಸೆ.20 ರಂದು ಬೆಳಗ್ಗೆ ಪ್ರಾತಃಕಾಲ ಪೂಜೆ, ಮಧ್ಯಾಹ್ನ ರಂಗಪೂಜೆ, ಸಂಜೆ 6 ರಿಂದ ಭಜನಾಕಾರ್ಯಕ್ರಮ, ತುಳುವೆರೆ ತುಡರ್ ಕಲಾತಂಡ ಸುರತ್ಕಲ್ ಅವರಿಂದ ಪಂಜುರ್ಲಿ ದೈವದ ಕಾರಣಿಕ ಕಥೆ- ಜರುಗಲಿದೆ.
ಸೆ.21 ರಂದು ಬೆಳಗ್ಗೆ ಪ್ರಾತಃಕಾಲ ಪೂಜೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 6ಕ್ಕೆ ರಂಗಪೂಜೆ ಮತ್ತು ಮಹಾಮಂಗಳಾರತಿ, ವಿಸರ್ಜನಾ ಪೂಜೆ, ಶೋಭಾಯಾತ್ರೆ ನಡೆಯುವುದು. ಶೋಭಾಯಾತ್ರೆಯು ಕರಂಗಲಪಾಡಿ, ಆವರಣದಿಂದ ಪಿವಿಎಸ್ ವೃತ್ತ, ಡೊಂಗರಕೇರಿವ, ಚಿತ್ರ ಟಾಕೀಸ್,ರಥಬೀದಿ, ವೆಂಕಟರಮಣ ದೇವಸ್ಥಾನದ ದಾರಿಯಾಗಿ ಸಾಗಿ ಮಹಾಮಾಯಿ ಕೆರೆಯಲ್ಲಿ ವಿಗ್ರಹವನ್ನು ವಿಸರ್ಜಿಸಲಾಗುವುದು ಎಂದು ಸಮಿತಿ ಅಧ್ಯಕ್ಷ ರವಿಚಂದ್ರ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.