ಜಿಲ್ಲೆ

ವಿವಿಧ ಕಲೆಗಳಲ್ಲಿ ಮಕ್ಕಳನ್ನು ತೊಡಗಿಸಿ...

ಪಾಲಕರಿಗೆ ಎಚ್​.ಕೆ. ಗಂಗಾಧರ ಕರೆ

ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಇಂದಿನ ಅನೇಕ ಪಾಲಕರು ಕೆಲಸದ ಒತ್ತಡದಿಂದಾಗಿ ಮಕ್ಕಳ ಪಾಲನೆಗೆ ಸಮಯಾವಕಾಶ ಇಲ್ಲದ್ದರಿಂದ ಅವರಿಗೆ ಮೊಬೈಲ್​ ನೀಡತೊಡಗಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಅತಿಯಾಗಿ ಮೊಬೈಲ್​ ಬಳಕೆಯಿಂದ ಮಕ್ಕಳಲ್ಲಿ ನಕಾರಾತ್ಮಕ ಧೋರಣೆ ಬೆಳೆಯುತ್ತದೆ. ಹೀಗಾಗಿ ಚಿತ್ರಕಲೆ, ಸಂಗೀತ, ನೃತ್ಯ ಮುಂತಾದ ಕಲೆಗಳಲ್ಲಿ ಮಕ್ಕಳನ್ನು ಆಸಕ್ತರನ್ನಾಗಿಸಬೇಕು. ವಿವಿಧ ಸ್ಪರ್ಧೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರಣೆ ನೀಡಬೇಕು ಎಂದು ಕೆನರಾ ಬ್ಯಾಂಕ್​ ಮಣಿಪಾಲ ವೃತ್ತ ಕಚೇರಿಯ ಮಹಾ ಪ್ರಬಂಧಕ ಎಚ್​.ಕೆ. ಗಂಗಾಧರ ಕರೆ ನೀಡಿದರು.

ಮಣಿಪಾಲದ ಸಿಂಡಿಕೇಟ್​ ಬ್ಯಾಂಕ್​ ಗೋಲ್ಡನ್​ ಜ್ಯುಬಿಲಿ ಆಡಿಟೋರಿಯಂನಲ್ಲಿ ಕೆನರಾ ಬ್ಯಾಂಕ್​ ಸಹಭಾಗಿತ್ವದಲ್ಲಿ ಮಣಿಪಾಲದ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗಾಗಿ ಆಗಸ್ಟ್​ 17ರಂದು ಆಯೋಜಿಸಿದ್ದ ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಪ್ರೊ.ಕಮಲಾಕ್ಷ, ಜೈವಿಠ್ಠಲ, ಯು.ಜಗನ್ನಾಥ ದೇವಾಡಿಗ, ಕಿರಣ ನಾಯಕ, ಸಚಿನ್​ ಶೆಟ್ಟಿ, ವಿಶಾಲ ಸಿಂಗ್​, ಮೋಹನಕೃಷ್ಣ, ಅನಂತ ಶೇಟ್​, ಕೃಷ್ಣಮೂರ್ತಿ ರಾವ್​, ಬಲ್ಲಾಳ, ನರಸಿಂಹ ಮೂರ್ತಿ, ಉದಯ ಇತರರು ಉಪಸ್ಥಿತರಿದ್ದರು.

350ಕ್ಕೂ ಹೆಚ್ಚು ವಿದ್ಯಾರ್ಥಿಗಳು ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಜೀವನ್​ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.