ಬೇಲೂರು ತಾಲೂಕಿನ ಬಿಕ್ಕೊಡು ಹೋಬಳಿ ಪಡುವಳಲು ಗ್ರಾಮದಲ್ಲಿ ಗಣೇಶ ವಿಸರ್ಜನಾ ಮಹೋತ್ಸವದಲ್ಲಿ ಭಾಗವಹಿಸಿರುವ ಗ್ರಾಮಸ್ಥರು. 
ಜಿಲ್ಲೆ

ದೊಡ್ಡಕೆರೆಯಲ್ಲಿ ಗಣೇಶ ವಿಸರ್ಜನೆ

ರವಿಕುಮಾರ್ ಪಿ. ಕೆ

ಬೇಲೂರು: ತಾಲೂಕಿನ ಬಿಕ್ಕೊಡು ಹೋಬಳಿ ಪಡುವಳಲು ಗ್ರಾಮದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ಸಂಜೆ ಗಾಮದ ದೊಡ್ಡಕೆರೆಯಲ್ಲಿ ಗಣೇಶವನ್ನು ವಿಸರ್ಜಿಸಲಾಯಿತು.

ಗಣೇಶ ವಿಸರ್ಜನಾ ಮಹೋತ್ಸವದ ಅಂಗವಾಗಿ ಗ್ರಾಮವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಗ್ರಾಮದ ಅಕ್ಕಪಕ್ಕದ ಗ್ರಾಮಸ್ಥರೆಲ್ಲ ಸೇರಿ ಸಾಮೂಹಿಕವಾಗಿ ಪ್ರಸಾದ ಸೇವಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡರು. ಗ್ರಾಮದ ಪುರುಷರು, ಮಹಿಳೆಯರು ಹಾಗೂ ಯುವಕ, ಯುವತಿಯರು ವಾದ್ಯದೊಂದಿಗೆ ನಂದಿ ಧ್ವಜವನ್ನಿಡಿದು ಕುಣಿದು ಕುಪ್ಪಳಿಸಿದರು.

ಗ್ರಾಮದ ಸೋಮಶೇಖರ್ ಮಾತನಾಡಿ, ಪಡುವಳಲು ಗ್ರಾಮದಲ್ಲಿ 14 ದಿನಗಳ ಕಾಲ ಗಣಪತಿಯನ್ನು ಪ್ರತಿಷ್ಠಾಪಿಸಿ ಗ್ರಾಮಸ್ಥರೆಲ್ಲ ಒಟ್ಟಾಗಿ ಗಣೇಶನ ಮೂರ್ತಿಯನ್ನು ಗ್ರಾಮದ ದೊಡ್ಡ ಕೆರೆಯಲ್ಲಿ ವಿಸರ್ಜಿಸಲಾಯಿತು ಎಂದರು. ಪಡುವಳಲು ಹಾಗೂ ಅಕ್ಕಪಕ್ಕದ ಗ್ರಾಮಸ್ಥರಿದ್ದರು.