ಕಾನಹೊಸಹಳ್ಳಿ ಪೊಲೀಸ್ ಠಾಣಾ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಪಿಎಸ್‌ಐ ಏರಿಯಪ್ಪ ಅಂಗಡಿ ಮಾತನಾಡಿದರು. ಸಿಪಿಐ ವೆಂಕಟಸ್ವಾಮಿ, ಪಿಎಸ್‌ಐ ನಾಗರತ್ನಾ, ಗ್ರಾಪಂ ಅಧ್ಯಕ್ಷ ಎ.ಸಿ.ಚೇತನ್ ಇದ್ದರು. 
ಜಿಲ್ಲೆ

ಗಣೇಶ, ಈದ್ ಮಿಲಾದ್ ಶಾಂತಿಯಿಂದ ಆಚರಿಸಿ

Gangavati - Desk - Veeresh S Ullagaddi

ಕಾನಹೊಸಹಳ್ಳಿ: ಗಣೇಶ, ಈದ್ ಮಿಲಾದ್ ಹಬ್ಬಗಳನ್ನು ಕೋಮು ಸೌರ್ಹಾದತೆ ಹಾಗೂ ಸಾಮರಸ್ಯದೊಂದಿಗೆ ಶಾಂತಿಯುತವಾಗಿ ಆಚರಿಸಬೇಕು ಎಂದು ಸಿಪಿಐ ವೆಂಕಟಸ್ವಾಮಿ ಹೇಳಿದರು.


ಪಟ್ಟಣದ ಪೊಲೀಸ್ ಠಾಣಾ ಅವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು.

ಗಣೇಶ ಪ್ರತಿಷ್ಠಾಪನೆಗೆ ಗ್ರಾಪಂ ಮತ್ತು ಜೆಸ್ಕಾಂನಿಂದ ಪರವಾನಿಗೆ ಪಡೆಯಬೇಕು. ಗಣೇಶ ವಿರ್ಸಜನೆ ವೇಳೆ ಡಿಜೆ ಬಳಕೆಗೆ ಅವಕಾಶವಿಲ್ಲ. ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಇದನ್ನೂ ಓದಿ: ಗಣೇಶ, ಈದ್ ಮಿಲಾದ್ ಶಾಂತಿಯಿಂದ ಆಚರಿಸಿ
ಪಿಎಸ್‌ಐ ಏರಿಯಪ್ಪ ಅಂಗಡಿ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆಗೆ ರಾತ್ರಿ ಹತ್ತು ಗಂಟೆವರೆಗೆ ಮಾತ್ರ ಅವಕಾಶವಿರುತ್ತದೆ. ಪರವಾನಿಗೆ ಇಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಗಣೇಶನ ಪ್ರತಿಷ್ಠಾಪನೆ ಮಾಡಿದರೆ ಅಂತಹವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.


ಆಪರಾಧ ವಿಭಾಗದ ಪಿಎಸ್‌ಐ ನಾಗರತ್ನಾ, ಗ್ರಾಪಂ ಅಧ್ಯಕ್ಷ ಎ.ಸಿ.ಚೇತನ್, ಪ್ರಮುಖರಾದ ಏಳೆನೀರು ಗಂಗಣ್ಣ, ಚಿಕ್ಕಜೋಗಿಹಳ್ಳಿ, ಮಹಮ್ಮದ್ ಹನೀಫ್, ಸಿದ್ದಲಿಂಗಪ್ಪ, ಆರ್ಯನ್ ಬಾಷಾ, ನಿಂಬಳಗೆರೆ ಮೊದೀನ್ ಸಾಬ್, ಕಲ್ಲಹಳ್ಳಿ, ವೀರೇಶ್ ಗೌಡ, ವಿಶ್ವನಾಥ್ ಇದ್ದರು.