ಜಿಲ್ಲೆ

ಗಣೇಶ್ ತಿಮ್ಮಯ್ಯಗೆ ಬೇತ್ ಗಿಡ ನೀಡಿ ಸನ್ಮಾನ

Kodagu

ಗೋಣಿಕೊಪ್ಪ: ಬಾಬು ಜಗಜೀವನ್‌ರಾಮ್ ಕಿಸಾನ್ ಸಮ್ಮಾನ್ ಪ್ರಶಸ್ತಿ ವಿಜೇತ ನಲ್ಲೂರು ಗ್ರಾಮದ ಸೋಮೇಂಗಡ ಗಣೇಶ್ ತಿಮ್ಮಯ್ಯ ಅವರನ್ನು ಮಂಗಳವಾರ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ವತಿಯಿಂದ ಸನ್ಮಾನಿಸಲಾಯಿತು.

ನಲ್ಲೂರು ಗ್ರಾಮದಲ್ಲಿರುವ ಕೃಷಿ ಭೂಮಿಗೆ ಭೇಟಿ ನೀಡಿದ ಮಹಾವಿದ್ಯಾಲಯ ಡೀನ್ ಡಾ. ಚೆಪ್ಪುಡೀರ ಜಿ. ಕುಶಾಲಪ್ಪ, ವಿಸ್ತರಣಾ ಘಟಕದ ಮುಖ್ಯಸ್ಥ ಡಾ. ಆರ್. ಎನ್. ಕೆಂಚರೆಡ್ಡಿ ಜೇನು ಹುಳುಗಳಿಗೆ ಪೂರಕವಾಗಿರುವ ಬೇತ್ ಗಿಡವನ್ನು ನೀಡುವ ಮೂಲಕ ಮತ್ತಷ್ಟು ಸಾಧನೆ ಮಾಡುವಂತೆ ಪ್ರೋತ್ಸಾಹಿಸಿದರು. ಕೃಷಿ ಅಧಿಕಾರಿ ತೀತಮಾಡ ಮೀರಾ ಉಪಸ್ಥಿತರಿದ್ದರು.