ರಾಯಚೂರು ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ಸಾಕಷ್ಟು ಸಲ ಶಾಂತಿ ಸಭೆ ನಡೆಸಿ ಡಿಜೆ ಬಳಸುವಂತಿಲ್ಲ ಎಂದು ಹೇಳಿದರೂ ಡಿಜೆ ಬಳಕೆ. ಡಿಜೆಗಳನ್ನು ಹೊರ ಜಿಲ್ಲೆಗಳಿಂದ ನೆರೆಯ ರಾಜ್ಯಗಳಿಂದಲೂ ಬರ್ತದೆ.ಗಡಿಯಲ್ಲಿ ತಡೆಯಲು ಹೋಗದ ಪೊಲೀಸರು ಮೆರವಣಿಗೆ ವೇಳೆ ಡಿಜೆ ಬಳಕೆಗೆ ತಡೆಯೊಡ್ಡಲು ಮುಂದಾಗಿರುವುದು ಐದನೇ ದಿನದ ಗಣೇಶ ವಿಸರ್ಜನೆ ವಾಗ್ವಾದ ಮಾತಿನ ಚಕಮಕಿಗೆ ದಾರಿಯಾಯಿತು.
ಜಿಲ್ಲೆಯ ಬಹುತೇಕ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳ ಗಣೇಶನನ್ನು ಭಾನುವಾರ ವಿಸರ್ಜಿಸಲಾಯಿತು. ಯುವಕ-ಯುವತಿಯರು, ಮಕ್ಕಳು ಪಟಾಕಿ ಸಿಡಿಸಿ, ಡಿಜೆ ಸದ್ದಿಗೆ ಹೆಜ್ಜೆ ಹಾಕುವ ಮೂಲಕ ಗಣೇಶನನ್ನು ಸಡಗರದಿಂದ ಬೀಳ್ಕೊಟ್ಟರು. ಕೆಲ ಮಂಡಳಿಗಳು ಡೊಳ್ಳು,ಡಿಜೆ ಬಳಕೆ, ಸಿನಿಮಾ ಹಾಡಿನ ವಿದಾಯದ ವೇಳೆ ಭಕ್ತಿಭಾವ ಮರೆತು ಯುವ ಜನರು ಅಬ್ಬರದ ಸಂಗೀತ, ಸಿನಿಮಾ ಹಾಡುಗಳ ಮೂಲಕ ವಿಸರ್ಜನೆ ಪ್ರಕ್ರಿಯೆ ಪೂರ್ಣಗೊಳಿಸಿದವು.ಸಾರ್ವಜನಿಕ ಗಣೇಶೋತ್ಸವದ ಹಿನ್ನೆಲೆಯಲ್ಲಿ ಕೆಲವೆಡೆ ಪ್ರಸಾದ ವ್ಯವಸ್ಥೆ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ಪರ್ಧೆಗಳು ನಡೆದವು.
ಜಿಲ್ಲೆಯಲ್ಲಿ ಎಷ್ಟು ಗಣೇಶ ವಿಸರ್ಜನೆ
ನಗರ ಸೇರಿದಂತೆ ಜಿಲ್ಲಾದ್ಯಂತ 5ನೇ ದಿನ 1150 ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದ್ದು, ಈಗಾಗಲೇ ಮೊದಲನೇ ದಿನ ಹಾಗೂ ಮೂರನೇ ದಿನದಲ್ಲಿ ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿದ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ. ಮತ್ತು 9ನೇ ದಿನಕ್ಕೆ 1066 ಕ್ಕೂ ಅಧಿಕ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲಾಗುತ್ತದೆ.
ಇದರ ಜತೆಗೆ ರಾಜ್ಯ ಸರ್ಕಾರದಿಂದ ಗಣೇಶ ಚತುರ್ಥಿಗೆ ಈ ಬಾರಿ ಡಿಜೆ ಬಳಕೆಯಲ್ಲಿ ಕೇವಲ ಎರಡು ಬೇಸ್,ಎರಡು ಟಾಪ್ ಸ್ಫೀಕರ್‌ಗಳನ್ನು ಬಳಸುವಂತೆ ಅದೇಶ ನೀಡಲಾಗಿದ್ದರಿಂದ ಯುವಕರಲ್ಲಿ ಬೇಸರ ಮನೆ ಮಾಡಿತ್ತು. ಸ್ವಲ್ಪ ಸೌಂಡ್ ಜಾಸ್ತಿ ಮಾಡಿದ್ದು ಕಂಡುಬಂದರೆ ಪೊಲೀಸರು ಅನಗತ್ಯವಾಗಿ ಡಿಜೆಗಳ ಎಂಪಿಪೈಯರ್ ಕಿತ್ತುಕೊಂಡು ಠಾಣೆಗೆ ಹೋಗುತ್ತಿದ್ದರು, ಲಕ್ಷಂತರ ರೂಪಾಯಿ ಖರ್ಚು ಮಾಡಿದ ಗಜಾನನ ಮಂಡಳಿಯಿಂದ ತೀವ್ರ ವಿರೋಧದ ಜತೆಗೆ ಕೆಲವೆಡೆ ಮಾತಿನ ಚಕಮಕಿ ಕಂಡುಬಂದಿತು.
ಬಿಗಿ ಪೋಲಿಸ್ ಬಂದೋಬಸ್ತ್
ನಗರದ ಮಾವಿನ ಕೆರೆ ಹತ್ತಿರದ ಕಸಭಾವಿ ಹಾಗೂ ದರೂರು ಬಾವಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಜಿಲ್ಲಾಡಳಿತ,ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಮಹಾನಗರ ಪಾಲಿಕೆಯಿಂದ ಸಕಾಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿತ್ತು, ಗಣೇಶ ಹಬ್ಬದ ಆಚರಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಗಣೇಶ ಮೆರವಣಿಗೆಯು ನಗರದ ಮಹಾವೀರ ವತ್ತ, ಚಂದ್ರಮೌಳೇಶ್ವರ ವತ್ತ, ಪಟೇಲ್ ರೋಡ್, ಶೆಟ್ಟಿ ಬಾವಿ ವತ್ತ,ಸರ್ಾ ಬಜಾರ್,ತಿಂನ್ ಕಂದಿಲ್ ವತ್ತದ ಮೂಲಕ ಮಾವಿನ ಕೆರೆಯಲ್ಲಿ ಗಣೇಶ್ ಮೂರ್ತಿಗಳ ವಿಸರ್ಜನೆ ಮಾಡಲಾಯಿತು.
ಕುಣಿದು ಕುಪ್ಪಳಿಸಿದ ಯುವಕರು
ಗಣೇಶೋತ್ಸವ ನಿಮಿತ್ತ ವೀರ ಸಾವರ್ಕರ್ ಅಸೋಸಿಯೇಷನ್ ವತಿಯಿಂದ ಭಜರಂಗ ದಳ್ ಗಣೇಶ ಮೂರ್ತಿ ಮೆರವಣಿಗೆ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಯುವಕರು ಪಾಲ್ಗೊಂಡಿದ್ದರು. ನಗರದಲ್ಲಿ ಪ್ರತಿ ವರ್ಷದಂತೆ ವೀರ ಸಾವರ್ಕರ್ ಅಸೋಸಿಯೇಷನ್ ವತಿಯಿಂದ ಸ್ಥಾಪನೆ ಮಾಡಿದ ಗಣೇಶ ಮೆರವಣಿಗೆ ಸಂದರ್ಭದಲ್ಲಿ ಹಿಂದೂ ಸಮಾಜದ ಹಾಡಿಗೆ ಡ್ಯಾನ್ಸ್ ಮಾಡಿರುವುದು ನೋಡುಗರ ಗಮನ ಸೆಳೆಯಿತು .