ಜಿಲ್ಲೆ

ವಿಸರ್ಜನೆ ಬಾವಿ ಸುತ್ತ ಸೌಲಭ್ಯ

Dharwada - Basavaraj Idli

ಹುಬ್ಬಳ್ಳಿ: ನಗರದಲ್ಲಿ ಶ್ರೀ ಗಣೇಶೋತ್ಸವ ಅದ್ದೂರಿಯಿಂದ ನಡೆಯುತ್ತಿದ್ದು, ಈ ಬಾರಿ ಗಣೇಶ ವಿಸರ್ಜನೆ ವೀಕ್ಷಣೆಗೆ ಅನುಕೂಲ ಕಲ್ಪಿಸಿ ಬಾವಿಗಳನ್ನು ಸಜ್ಜುಗೊಳಿಸಲಾಗಿದೆ.

ಹೊಸೂರು ಹಾಗೂ ಇಂದಿರಾ ಗಾಜಿನ ಮನೆ ಆವರಣದ ಎರಡು ಬಾವಿಗಳ ಪರಿಶೀಲನೆ ಮಾಡಿದ ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಅವರು, ಪ್ರಸ್ತುತ ಶ್ರೀ ಗಣೇಶ ಮೂತಿರ್ಗಳ ವಿಸರ್ಜನೆಗೆ ಯಾವುದೇ ತೊಂದರೆಯಾಗದಂತೆ ನೀರು ತುಂಬಿಸಲಾಗಿದೆ ಎಂದರು.

ಸಮರ್ಪಕ ವಿದ್ಯುತ್, ಕ್ರೇನ್ ಗಳ ವ್ಯವಸ್ಥೆ ಹಾಗೂ ಬಾವಿಯ ಸುತ್ತಮುತ್ತ ಸುಂದರ ಪರಿಸರ ನಿಮಿರ್ಸಲಾಗಿದೆ. ಗಣೇಶ ಭಕ್ತರಿಗೆ ಆಸನಗಳ ವ್ಯವಸ್ಥೆ ಮಾಡಲಾಗಿದೆ. ರಸ್ತೆಗಳ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದೆ. ಈಜುಗಾರರನ್ನು ನೇಮಕ ಮಾಡಲಾಗಿದೆ ಎಂದರು.

ಹುಬ್ಬಳ್ಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಮಹಾಮಂಡಳದ ಮನವಿಗೆ ಸ್ಪಂದಿಸಿದ ಆಯುಕ್ತರು, ಬಾವಿಯ ಮಧ್ಯದಲ್ಲಿ ಗಣೇಶ ಮೂತಿರ್ ವಿಸರ್ಜನೆ ಮಾಡುವ ನಿಟ್ಟಿನಲ್ಲಿ ಹೈಡ್ರಾಲಿಕ್ ಕ್ರೇನ್, ಪುಣೆ, ಬೆಳಗಾವಿ ಮಾದರಿಯಲ್ಲಿ ಹೈಡ್ರಾಲಿಕ್ ಲಿಫ್ಟ್ ನಿರ್ಮಾಣ ಮಾಡಲು ಚಿಂತನೆ ನಡೆದಿದೆ ಎಂದು ಹೇಳಿದರು.

ಮಹಾಮಂಡಳದ ಶಾಂತರಾಜ ಪೋಳ, ಅಲ್ತಾಫ್ ಕಿತ್ತೂರು, ಅಮರೇಶ ಹಿಪ್ಪರಗಿ, ಗಾಯತ್ರಿ ನೆಲ್ಲಿಕೊಪ್ಪ, ಸವಿತಾ ಚಂದನಮಟ್ಟಿ ಮಾತನಾಡಿದರು.

ಡಾ. ಚಿದಾನಂದ ತೆಗ್ಗಿಹಳ್ಳಿ, ಅನಿಲ್ ಬೇವಿನಕಟ್ಟಿ, ಅನಿಲ್ ಕವಿಶೆಟ್ಟಿ, ರೋಹನ ಗೋಂದಕರ, ಎಸ್.ಎಸ್. ಕಮಡೊಳ್ಳಿಶೆಟ್ಟರ್, ಮಹೇಶ ಶೇಟ್, ಸರಸ್ವತಿ ಮೆಹರವಾಡೆ, ರೇಖಾ ಆಪ್ಟೆ, ಸಿ.ಜಿ. ಧಾರವಾಡಶೆಟ್ಟರ್, ಸಂಗೀತಾ ದೇವದಾಸ, ಇಂಜಿನಿಯರ್ ವಿಜಯಕುಮಾರ ಇತರರು ಇದ್ದರು.