ಜಿಲ್ಲೆ

ಯುವಕರ ಒಗ್ಗಟ್ಟಿನ ಸಂಕೇತ ಗಣೇಶೋತ್ಸವ

ಮಾಗಡಿ: ಯುವಕರ ಒಗ್ಗಟ್ಟಿನ ಸಂಕೇತವೇ ಗಣೇಶೋತ್ಸವ ಎಂದು ರಾಜ್ಯ ಕಟ್ಟಡ ಮತ್ತು ಅಸಂಟಿತ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಡಾ.ಪ್ರಸನ್ನಗೌಡ ಹೇಳಿದರು.

ತಾಲೂಕಿನ ಹಾಲಶೆಟ್ಟಹಳ್ಳಿಯಲ್ಲಿ ವಿನಾಯಕ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಗಣೇಶೋತ್ಸವ ಹಾಗೂ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಪ್ರತಿ ಗ್ರಾಮಗಳ ಬೀದಿಗಳಲ್ಲಿ ಯುವಕರು ಪಾತೀತ, ಜಾತ್ಯತಿತ, ಸಡಗರ, ಸಂಭ್ರಮದಿಂದ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಸ್ನೇಹ, ವಿಶ್ವಾಸ, ಒಗ್ಗಟ್ಟು ಪ್ರದರ್ಶಿಸುತ್ತಾರೆ. ಅದರಂತೆ ಹಾಲಶೆಟ್ಟಿಹಳ್ಳಿ ಯುವಕರು ಒಟ್ಟಾಗಿ ಗಣಪತಿ ಪ್ರತಿಷ್ಠಾಪಿಸಿ, ಸಾಮರಸ್ಯ ಮೂಡಿಸಿರುವುದು ಮಾದರಿ.

ಈಗ ಗಣೇಶನನ್ನು ಪ್ರತಿಷ್ಠಾಪಿಸಿರುವಂತೆ ಗ್ರಾಮದ ಅಭಿವೃದ್ಧಿಗೂ ಯುವಕರು ಒತ್ತು ನೀಡಿದರೆ ಗ್ರಾಮ ಪ್ರಗತಿ ಕಾಣಲಿದೆ. ಏನೆ ಸಮಸ್ಯೆ, ಮನಸ್ತಾಪ ಬಂದರೂ ಬೇಸರ, ಕಿತ್ತಾಡಿಕೊಳ್ಳದೆ ಶಾಂತಿ, ನೆಮ್ಮದಿ, ಸಹಬಾಳ್ವೆ, ಐಕ್ಯತೆಯ ಜೀವನ ಸಾಗಿಸಬೇಕು. ಆಗಲೇ ಇಂತಹ ಉತ್ಸವಗಳನ್ನು ಆಯೋಜಿಸಿದಕ್ಕೂ ಆರ್ಥಬರಲಿದೆ ಎಂದರು.

ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಸುಮಾ ರಮೇಶ್​ ಮಾತನಾಡಿ, ನಗರ, ಪಟ್ಟಣ ಪ್ರದೇಶಕ್ಕೆ ಸೀಮಿತವಾದ ರಸಮಂಜರಿ ಕಾರ್ಯಕ್ರಮಗಳನ್ನು ಇಂದು ಕುಗ್ರಾಮದಲ್ಲಿ ಯುವಕರು ಒಗ್ಗೂಡಿ ಆಯೋಜಿಸಿ, ಗ್ರಾಮಸ್ಥರಿಗೆ ಮನೋರಂಜನೆ ಒದಗಿಸುವುದು ಉತ್ತಮ ಬೆಳವಣಿಗೆ. ಉತ್ಸವ, ಧಾರ್ಮಿಕ ಆಚರಣೆಗಳು ನಿರಂತರವಾಗಿರಲಿ ಎಂದರು.

ಮುಖಂಡ ಕೋಳಿ ಅಂಗಡಿ ಕೃಷ್ಣಮೂರ್ತಿ ಮಾತನಾಡಿ, ಗ್ರಾಮದಲ್ಲಿ 20 ವರ್ಷಗಳಿಂದ ವಿನಾಯಕ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ, 20ನೇ

ವರ್ಷದ ಪ್ರಯುಕ್ತ ಕ್ರಿಕೆಟ್​ ಪಂದ್ಯಾವಳಿ, ರಂಗೋಲಿ ಸ್ಪರ್ಧೆ, ಲಕ್ಕಿ ಕೂಪನ್​ ಡ್ರಾ ಸೇರಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಂಡು, ವಿಜೇತರಿಗೆ ಬಹುಮಾನ ವಿತರಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ರಂಗಗಳ ಸಾಧಕರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಗಣೇಶ ಮೂರ್ತಿಯನ್ನು ಸಾಂಸತಿಕ ಕಲಾ ತಂಡಗಳೊಂದಿಗೆ ಗ್ರಾಮದ ರಾಜಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ನಡೆಸಿ, ಭಾನುವಾರ ಸಂಜೆ ಕೆಂಪಸಾಗರ ಕೆರೆಗೆ ವಿಸರ್ಜಿಸಲಾಯಿತು.

ಮುಖಂಡರಾದ ಶಿವಪ್ರಸಾದ್​, ವಿಶ್ವಣ್ಣ, ಗಿರೀಶ್​, ವಿಜಯಕುಮಾರ್​, ಯೋಗೇಶ್​, ಅರ್ಚಕ ರಂಗನಾಥಸ್ವಾಮಿ, ಕೆಂಪಸಾಗರ ರೂಪೇಶ್​, ಲಕ್ಷಿ$್ಮನಾರಾಯಣ್​, ವಿಎಸ್ಸೆಸ್ಸೆನ್​ ಕಾರ್ಯದರ್ಶಿ ಚಂದ್ರು, ಕುಮಾರ್​, ಕಾಳಯ್ಯ ಇದ್ದರು.