ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಕಮಲನಗರ ಪೊಲೀಸ್ ಠಾಣೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಸಿಪಿಐ ಅಮರೆಪ್ಪ ಎಸ್. ಮಾತನಾಡಿದರು. ಪಿಎಸ್‌ಐ ಚಂದ್ರಶೇಖರ ನಿರ್ಣೆ, ಮುಖಂಡ ಶಿವಾನಂದ ವಡ್ಡೆ, ಪ್ರವೀಣ ಬಿರಾದಾರ, ಬಾಲಾಜಿ ಬಿರಾದಾರ ಇತರರಿದ್ದರು. 
ಜಿಲ್ಲೆ

ಸಾರ್ವಜನಿಕರಿಗೆ ತೊಂದರೆಯಾದರೆ ಕಾನೂನು ಕ್ರಮ

ರಾಜು ಯಮಕನಮರಡಿ

ಕಮಲನಗರ: ಸಾರ್ವಜನಿಕರಿಗೆ ತೊಂದರೆಯಾಗದಂತೆ ಗಣಪತಿ ಹಬ್ಬ ಆಚರಿಸಬೇಕು. ಸಾರ್ವಜನಿಕರಿಗೆ ತೊಂದರೆ ಕೊಟ್ಟರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಿಪಿಐ ಅಮರೆಪ್ಪ ಎಸ್. ಎಚ್ಚರಿಕೆ ನೀಡಿದರು.

ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಕಮಲನಗರ ಠಾಣಾ ವ್ಯಾಪ್ತಿಗೆ ಸೇರಿದ ಗ್ರಾಮಗಳ ಮುಖ್ಯಸ್ಥರೊಂದಿಗೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡಬಾರದು. ಗಣೇಶೋತ್ಸವಕ್ಕೆ ಹಣವನ್ನು ವಸೂಲಿ ಮಾಡಬಾರದು. ಒತ್ತಾಯ ಪೂರ್ವಕವಾಗಿ ವಸೂಲಿ ಮಾಡಲು ಬಂದಲ್ಲಿ ಠಾಣೆಗೆ ತಿಳಿಸಬೇಕು ಎಂದು ತಿಳಿಸಿದರು.

ಪಿಎಸ್‌ಐ ಚಂದ್ರಶೇಖರ ನಿರ್ಣೆ ಮಾತನಾಡಿ, ಗಣೇಶ ಮೂರ್ತಿ ಪ್ರತಿಷ್ಠಾಪಿಸುವಾಗ ಸ್ಥಳೀಯ ಗ್ರಾಪಂ ಹಾಗೂ ಪೊಲೀಸ್ ಠಾಣೆಯ ಅನುಮತಿ ಪಡೆದುಕೊಳ್ಳಬೇಕು. ಸೌಂಡ್ ಸಿಸ್ಟಂ , ಧ್ವನಿವರ್ಧಕ ಬಳಕೆಗೆ ಪೊಲೀಸರಿಂದ ಮತ್ತು ವಿದ್ಯುತ್ ದೀಪ ಬಳಸಲು ಕಡ್ಡಾಯವಾಗಿ ಜೆಸ್ಕಾಂ ಅನುಮತಿ ಪಡೆದುಕೊಳ್ಳಬೇಕು ಎಂದು ಹೇಳಿದರು.

ಮುಖಂಡ ಶಿವಾನಂದ ವಡ್ಡೆ, ಪ್ರವೀಣ ಬಿರಾದಾರ, ಬಾಲಾಜಿ ಬಿರಾದಾರ, ಜ್ಞಾನೇಶ್ವರ ಬಾಲೂರ್, ಸಾಗರ ಮಿರ್ಚೆ, ಲೋಕೇಶ ತೇಲಂಗ್ ಇತರರಿದ್ದರು.

ಗೌರಿ ಗಣೇಶ ಹಬ್ಬದಲ್ಲಿ ಯುವಕರು ಎಲ್ಲೆಂದರಲ್ಲಿ ಹಗ್ಗ ಹಾಕಿ ಚಂದಾ ಎತ್ತುವಂತಿಲ್ಲ. ಗಣಪತಿಗಳು ಪರಿಸರ ಸ್ನೇಹಿಯಾಗಿರಬೇಕು. ಸಾರ್ವಜನಿಕರಿಗೆ ಖುಷಿ ನೀಡುವ ಕಾರ್ಯಕ್ರಮ ಆಯೋಜಿಸಬೇಕು.
| ಅಮರೆಪ್ಪ ಎಸ್. ಸಿಪಿಐ ಕಮಲನಗರ