ನರಗುಂದ: ಗಣಪತಿ ಪೂಜೆಗೆ ಸಾರ್ವಜನಿಕ ಸ್ವರೂಪ ನೀಡಿದವರು ಬಾಲಗಂಗಾಧರ ತಿಲಕ ಅವರು. ಕೇವಲ ಭಾರತ ಅಷ್ಟೇ ಅಲ್ಲ. ಪ್ರಪಂಚದ ಅನೇಕ ದೇಶಗಳಲ್ಲಿ ಗಣೇಶ ಆರಾಧನೆ ಪ್ರತಿವರ್ಷವೂ ಜರುಗುತ್ತದೆ. ಕೇವಲ ಮನೆಯೊಳಗೆ ದೈವಿ ಭಕ್ತಿಯಿಂದ ಆರಾಧಿಸಲ್ಪಡುತ್ತಿದ್ದ ಗಣೇಶ ಚತುರ್ಥಿ ಇಂದು ನಾಡಿನ ಹಬ್ಬವಾಗಿ ರೂಪಗೊಂಡು ಎಲ್ಲ ಕಡೆಗೂ ವ್ಯಾಪಿಸಿದೆ ಎಂದು ಭಾರತೀಯ ಸಂಗೀತ ವಿದ್ಯಾಲಯದ ಶಿಕ್ಷಕ ಶ್ರೀನಿವಾಸ ಇನಾಮದಾರ ಹೇಳಿದರು.
ಗಣೇಶೋತ್ಸವದ ಪ್ರಯುಕ್ತ ಪಟ್ಟಣದ ಭಾರತೀಯ ಸಂಗೀತ ವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗೀತಗಾಯನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಂಜುನಾಥ ಪಲ್ಲೇದ, ವಿಜಯಲಕ್ಷ್ಮೀ ತಡಸದ, ವೀಣಾ ಇಂಗಳಳ್ಳಿ, ಅನನ್ಯಾ ಆನೇಗುಂದಿ ಶಾಸ್ತ್ರಿಯ ಸಂಗೀತದೊಂದಿಗೆ ಅನೇಕ ಗೀತೆಗಳನ್ನು ಪ್ರಸ್ತುತಪಡಿಸಿದರು. ಪ್ರಿಯಾ ಗುಡಿಸಾಗರ, ಮಹಾದೇವಿ ಬೆಳಗಾವಿ ಉಪಸ್ಥಿತರಿದ್ದರು. ನಂತರ ಅನ್ನ ಸಂತರ್ಪಣೆ ಜರುಗಿತು.