ಜಿಲ್ಲೆ

ಗಾಂಧಿನಗರದ ಸ್ಮಶಾನ ಆದಿ ಕರ್ನಾಟಕ ಅಭಿವೃದ್ಧಿ ಸಂಘಕ್ಕೆ ಬರುವುದಿಲ್ಲ

ಮೈಸೂರು: ಗಾಂಧಿನಗರದ ಸ್ಮಶಾನ ನಗರಪಾಲಿಕೆ ವಶದಲ್ಲಿರುವುದರಿಂದ ಅದರ ನಿರ್ವಹಣೆ ಗಾಂಧಿನಗರ ಆದಿಕರ್ನಾಟಕ ಅಭಿವೃದ್ಧಿ ಸಂಘಕ್ಕೆ ಬರುವುದಿಲ್ಲ ಎಂದು ಸಂಘದ ಅಧ್ಯಕ್ಷ ವಿಷಕಂಠಮೂರ್ತಿ ಸ್ಪಷ್ಟಪಡಿಸಿದ್ದಾರೆ.

ಸಮುದಾಯದ ರುದ್ರಭೂಮಿ ನಗರಪಾಲಿಕೆ ವಶದಲ್ಲಿರುವುದರಿಂದ ಅದರ ನಿರ್ವಹಣೆ, ದುಸ್ಥಿತಿ ಕುರಿತು ಸಂಘವನ್ನು ಕೆಲವರು ದೂರುವುದು ಸರಿಯಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸಂಘದಿಂದ ನಿರ್ವಹಣೆ ಮಾಡುತ್ತಿರುವ ಕಟ್ಟಡದ ಛಾವಣಿ ದುಸ್ಥಿತಿ ತಲುಪಿದ್ದರೂ ಬಾಡಿಗೆದಾರರು ಮಳಿಗೆ ಖಾಲಿ ಮಾಡದೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಹಾಗಾಗಿ ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಾಣಕ್ಕೆ ತೊಡಕಾಗಿದೆ. ಆದರೆ ಇದನ್ನೇ ಕೆಲವರು ದುರುದ್ದೇಶದಿಂದ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.

ಸಂಘದ ಪದಾಧಿಕಾರಿಗಳಾದ ವಿಶ್ವರಾಜ್, ರಮೇಶ್, ಚಲುವರಾಜು ಇದ್ದರು.