ಜಿಲ್ಲೆ

ಕೆಆರ್‌ಎಸ್‌ನಲ್ಲಿ ಗಾಂಧೀಜಿ, ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

ಕೆ.ಆರ್.ಸಾಗರ: ಕೆ.ಆರ್.ಸಾಗರ ವಿಭಾಗದ ಕಾವೇರಿ ನೀರಾವರಿ ನಿಗಮವು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿಯನ್ನು ಬುಧವಾರ ಬೃಂದಾವನದಲ್ಲಿ ಆಚರಿಸಲಾಯಿತು.


ಬೃಂದಾವನದಲ್ಲಿರುವ ಮಹಾತ್ಮ ಗಾಂಧೀಜಿ ಚಿತ್ರವಿರುವ ಕಾರಂಜಿಯ ಮುಂಭಾಗದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಲಾಯಿತು. ಕೆ.ಆರ್.ಸಾಗರ ಕಾವೇರಿ ನೀರಾವರಿ ನಿಗಮ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಫಾರೂಕ್ ಅಭು ಗಾಂಧೀಜಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿದರು.


ಫಾರೂಕ್ ಅಭು ಮಾತನಾಡಿ, ನಾವು ಗಾಂಧೀಜಿ ಅವರ ತತ್ವಗಳನ್ನು ಅಳವಡಿಸಿಕೊಳ್ಳಬೇಕು, ಇಂದಿನ ಯುವ ಪೀಳಿಗೆ ಗಾಂಧೀಜಿ ಅವರನ್ನು ಮರೆಯುತ್ತಿದ್ದಾರೆ. ಮುಂದಿನ ಪೀಳಿಗೆಗೆ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ದೇಶದ ಸ್ವಾತಂತ್ರೃಕ್ಕೆ ಹೋರಾಟ ಮಾಡಿದ ದಿನಗಳ ಬಗ್ಗೆ ತಿಳಿಸಬೇಕಾಗಿದೆ ಎಂದರು.


ಕೆ.ಆರ್.ಸಾಗರ ಯೋಜನೆ ಶಾಖೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಪ್ಪ, ಖಜಾಂಚಿ ನಾಗೇಶ್, ಕಾವೇರಿ ನೀರಾವರಿ ನಿಗಮದ ಇಂಜಿನಿಯರ್‌ಗಳಾದ ಶಿವಕುಮಾರ್, ಅಕಿಬ್ ಜಾವಿದ್ ಸಿಬ್ಬಂದಿ ಜೈ ಪ್ರಕಾಶ್, ಶಿವಕುಮಾರ್, ಮಾಥ್ಯೂ ಮತ್ತಿತರರಿದ್ದರು.