ಜಿಲ್ಲೆ

ಗಾಂಧೀಜಿಯವರ ತತ್ವ ಪಾಲನೆ ಇಂದಿನ ಅಗತ್ಯ

ವಿಜಯವಾಣಿ ಸುದ್ದಿಜಾಲ ಧಾರವಾಡ

ಮಹಾತ್ಮಾ ಗಾಂಧೀಜಿಯವರ ತತ್ವ ಪಾಲನೆ ಇಂದಿನ ಅಗತ್ಯವಾಗಿದೆ. ಯುವ ಜನಾಂಗ ಗಾಂಧೀಜಿಯವರನ್ನು ಮರೆಯುತ್ತಿರುವ ಸಂದರ್ಭದಲ್ಲಿ ಗಾಂಧೀಜಿಯವರ ಸತ್ಯ, ಶಾಂತಿ, ಅಹಿಂಸೆಯ ತತ್ವಗಳನ್ನು ಜೀವಂತವಾಗಿಡುವ ಪ್ರಯತ್ನ ಮಾಡುತ್ತಿರುವ ಸಿದ್ಧವೀರ ಸತ್ಸಂಗದ ಕಾರ್ಯ ಶ್ಲಾಘನೀಯ ಎಂದು ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಕಾರ್ಯಾಧ್ಯಕ್ಷ ಹಾಗೂ ಮಾಜಿ ಮೇಯರ್ ಈರೇಶ ಅಂಚಟಗೇರಿ ಹೇಳಿದರು.

ನಗರದ ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಸಿದ್ಧವೀರ ಸತ್ಸಂಗದ ಆಶ್ರಯದಲ್ಲಿ ಜಿಲ್ಲಾ ಸಾಹಿತ್ಯ ಪರಿಷತ್ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ಗಾಂಧೀಜಿ, ಲಾಲ್‌ಬಹಾದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗಾಂಧೀಜಿಯವರು ಹೋರಾಟದ ಮುಂಚೂಣಿಯಲ್ಲಿದ್ದರೆ0ಬ ಕಾರಣದಿಂದ ನಾವಿಂದು ಸ್ವಾತಂತ್ರ‍್ಯ ಅನುಭವಿಸಲು ಸಾಧ್ಯವಾಗಿದೆ ಎಂದರು.

ಎಲ್‌ಐಸಿಯ ಮುಖ್ಯ ಸಲಹೆಗಾರ ಆನಂದ ಅಮರಶೆಟ್ಟಿ ಮಾತನಾಡಿ, ಗಾಂಧೀಜಿಯವರ ಉತ್ಸಾಹ ಇಂದಿನ ಜನಾಂಗಕ್ಕೆ ಸ್ಪೂರ್ತಿ ಯಾಗಬೇಕು. ಯುವಕರು ಹಿಡಿದ ಕೆಲಸವನ್ನು ಕಷ್ಟ ಪಟ್ಟು ಮಾಡದೆ ಇಷ್ಟ ಪಟ್ಟು ಮಾಡಿದಾಗ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.

ಸಿದ್ಧವೀರ ಸತ್ಸಂಗದ ಅಧ್ಯಕ್ಷ ಹಾಗೂ ಕಾಮಣಿ ತಜ್ಞ ಡಾ. ನಿತಿನ್‌ಚಂದ್ರ ಹತ್ತಿಕಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಗಣೇಶ ಕದಂ ಸ್ವಾಗತಿಸಿದರು.

ಬಸವರಾಜ ತಾಳಿಕೋಟಿ, ಲಿಂಗಯ್ಯ ಹಿರೇಮಠ, ಶ್ರೀರಂಜಿನಿ ದತ್ತಾತ್ರೇಯ ವೇದಿಕೆಯಲ್ಲಿದ್ದರು.

ಡಾ. ಸುಹಾಸ ಕಲಘಟಗಿ, ಡಾ. ಶಿರಿನ್ ಜಾಧವ, ಮಲ್ಲಿಕಾರ್ಜುನ ಮಠಪತಿ, ಮೇಘಾ ಹುಕ್ಕೇರಿ, ಮಹಾಂತೇಶ ನೆರೇಗಲ್ಲ, ಪಾರ್ವತಿ ಹಮ್ಮಿಗಿ, ಪ್ರಮೀಳಾ ಜಕ್ಕಣ್ಣವರ ಮೊದಲಾದ ಸಾಧಕರನ್ನು ಸನ್ಮಾನಿಸಲಾಯಿತು.

ವಿವಿಧ ಮಹಿಳಾ ತಂಡಗಳಿ0ದ ಗಾಂಧಿ ಭಜನೆ ನಡೆಯಿತು. ಶ್ರೀನಿಧಿ ಜಕ್ಕಣ್ಣನವರ ಪ್ರಾರ್ಥಿಸಿದರು. ಚಿಂತನ ಹತ್ತಿಕಾಳ ವಂದಿಸಿದರು.