ಹನೂರು: ದೇಶಕ್ಕಾಗಿ ಶ್ರಮಿಸಿದ ಮಹನೀಯರಿಂದ ಸಾರ್ವಜನಿಕರ ಸೇವೆ ಮಾಡಲು ಅವಕಾಶ ಸಿಕ್ಕಿದೆ. ಆದ್ದರಿಂದ ಪ್ರತಿಯೊಬ್ಬರೂ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದಾಗ ಅವರ ಆದರ್ಶಗಳಿಗೆ ಸಾರ್ಥಕತೆ ಬರುತ್ತದೆ ಎಂದು ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ.ರಘು ತಿಳಿಸಿದರು.
ಮ.ಬೆಟ್ಟದ ಪ್ರಾಧಿಕಾರದ ಕಚೇರಿಯಲ್ಲಿ ಆಯೋಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ದೇಶ ಬ್ರಿಟಿಷರ ಅಧೀನದಲ್ಲಿದ್ದಾಗ ಜನರು ಶೋಷಣೆ ಅನುಭವಿಸುವುದರ ಜತೆಗೆ ಸಂಕೋಲೆಗೆ ಒಳಗಾಗಿದ್ದರು. ಈ ವೇಳೆ ದೇಶಕ್ಕೆ ಸ್ವಾತಂತ್ರ್ಯ ಅನಿವಾರ್ಯವಾಗಿದ್ದು ನಾಯಕರ ಅಗತ್ಯತೆ ಇತ್ತು. ಈ ಸಂದರ್ಭದಲ್ಲಿ ಪ್ರಮುಖ ನಾಯಕತ್ವ ವಹಿಸಿದವರು ಮಹಾತ್ಮ ಗಾಂಧೀಜಿ. ಅವರ ಗ್ರಂಥಗಳನ್ನು ಪ್ರತಿಯೊಬ್ಬರೂ ಓದಬೇಕು ಎಂದರು.
ಪ್ರಾಧಿಕಾರದ ನೌಕರರಾದ ರವೀಂದ್ರ, ಮಹೇಶ್‌ಕುಮಾರ್, ಶ್ರೀನಿವಾಸ್, ಕೃಷ್ಣಮೂರ್ತಿ, ರಮೇಶ್, ಮಹಾದೇವ ಪ್ರಭು, ಪೊನ್ನಯ್ಯ, ಗೋಪಾಲ್, ನಾಗೇಂದ್ರ, ನಾಗರಾಜು, ಕೃಷ್ಣಕುಮಾರ್ ಇದ್ದರು.