ನೆಲಮಂಗಲದ ತಾಲೂಕು ಕಚೇರಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್‌ಶಾಸ್ತ್ರಿ ಜಯಂತಿಯಲ್ಲಿ ಶಾಸಕ ಡಾ.ಕೆ.ಶ್ರೀನಿವಾಸ್‌ಮೂರ್ತಿ, ತಾಪಂ ಇಒ ಮೋಹನ್‌ಕುಮಾರ್, ತಹಸೀಲ್ದಾರ್ ಕೆ.ಮಂಜುನಾಥ್, ಕನ್ನಡ ಸಾಂಸ್ಕೃತಿಕ ರಂಗ ಡಿ.ಸಿದ್ಧರಾಜು ಇತರರಿದ್ದರು 
ಜಿಲ್ಲೆ

ಉಗ್ರಗಾಮಿಗಳ ಮಟ್ಟ ಹಾಕುವುದು ಅಗತ್ಯ

ನೆಲಮಂಗಲ: ದೇಶದ ಸ್ವಾತಂತ್ರ್ಯಕ್ಕಾಗಿ ಇಡೀ ಜೀವನವನ್ನು ಮುಡುಪಾಗಿರಿಸಿದ್ದ ಗಾಂಧಿ ಅವರು ಆದರ್ಶನೀಯ ವ್ಯಕ್ತಿಯಾಗಿದ್ದಾರೆ ಎಂದು ಶಾಸಕ ಡಾ.ಕೆ.ಶ್ರೀನಿವಾಸ್ ಹೇಳಿದರು.


ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಭಾನುವಾರ ತಾಲೂಕು ಆಡಳಿತ ಆಯೋಜಿಸಿದ್ದ ಗಾಂಧಿ ಹಾಗೂ ಲಾಲ್ ಬಹಾದೂರ್‌ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.


ಸ್ವ-ಹಿತವನ್ನು ಬಿಟ್ಟು ದೇಶಕ್ಕಾಗಿ ಬದುಕಿದವರು ಅವಿಸ್ಮರಣೀಯವಾಗಿ ಎಲ್ಲ ಹೃದಯದಲ್ಲಿ ಉಳಿಯಲಿದ್ದಾರೆ. ಅಹಿಂಸೆ ಮೂಲಕ ಜಗತ್ತನ್ನೇ ತನ್ನತ್ತ ಸೆಳೆದ ಗಾಂಧಿ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ದೇಶ ಕಟ್ಟಬೇಕಾದ ಯುವಶಕ್ತಿಯನ್ನು ಕೆಲ ಉಗ್ರಗಾಮಿಗಳು ದಾರಿ ತಪ್ಪಿಸಿ ದೇಶ ನಾಶ ಮಾಡುತ್ತಿದ್ದು, ಇದನ್ನು ಮಟ್ಟ ಹಾಕಬೇಕಿದೆ ಎಂದರು.
ತಹಸೀಲ್ದಾರ್ ಕೆ.ಮಂಜುನಾಥ್ ಮಾತನಾಡಿ, ಗಾಂಧೀಜಿ ಹಾಗೂ ಶಾಸ್ತೀಜೀ ಅವರ ಆದರ್ಶಯುತ ಬದುಕು, ಹೋರಾಟಗಳನ್ನು ಇಡೀ ಜಗತ್ತು ಒಪ್ಪಿಕೊಂಡಿದೆ. ದೇಶದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲೂ ಗಾಂಧಿ ಸ್ಮರಣೆ ಮಾಡಲಾಗುತ್ತಿದೆ ಎಂದರು.


ನಗರಸಭೆ ನಾಮ ನಿರ್ದೇಶಿತ ಸದಸ್ಯ ಎಂ.ರವಿ, ರಾಜಮ್ಮ ಪ್ರಕಾಶ್, ಚಂದ್ರಶೆಟ್ಟಿ, ಕಸಾಪ ತಾಲೂಕು ಅಧ್ಯಕ್ಷ ಪ್ರದೀಪ್, ಕರ್ನಾಟಕ ಜನಸೈನ್ಯ ಸಂಘಟನೆ ಸಂಸ್ಥಾಪಕ ಬಿ.ನರಸಿಂಹಯ್ಯ, ಶಿರಸ್ತೇದಾರ್ ರವೀಂದ್ರ, ರಾಜಸ್ವ ನಿರೀಕ್ಷಕ ಅಶ್ವತ್ಥ್, ಸುದೀಪ್, ಗ್ರಾಮಲೆಕ್ಕಾಧಿಕಾರಿ ಲೋಕೇಶ್, ಗುತ್ತಿಗೆದಾರ ಗೋವೆನಹಳ್ಳಿಉಮೇಶ್ ಇದ್ದರು.