ಜಿಲ್ಲೆ

ಗಾಂಧಿವಾದ ಇಂದಿಗೂ ಮಹತ್ವ ಹೊಂದಿದೆ

ಎ. ಆರ್. ರಘುರಾಮ

ಹುಣಸೂರು : ನೈತಿಕತೆ ಮತ್ತು ನಡವಳಿಕೆಯ ದೃಷ್ಟಿಯಿಂದ ಗಾಂಧಿವಾದ ಇಂದಿಗೂ ಮಹತ್ವ ಹೊಂದಿದೆ ಎಂದು ಕೆ.ಆರ್.ನಗರ ಸರ್ಕಾರಿ ಪ್ರಥಮದರ್ಜೆ ಕಾಲೇಜು ಇತಿಹಾಸ ಪ್ರಾಧ್ಯಾಪಕ ಪ್ರೊ.ಕೆ.ಎನ್.ಮೋಹನ್ ಅಭಿಪ್ರಾಯಪಟ್ಟರು. ನಗರದ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಇತಿಹಾಸ ವಿಭಾಗವು ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಗುರುವಾರ ಆಯೋಜಿಸಿದ್ದ ‘ ಪ್ರಸ್ತುತ ಭಾರತದಲ್ಲಿ ಗಾಂಧೀಜಿ ಚಿಂತನೆಗಳು-ಕುರಿತ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಗಾಂಧೀವಾದ ಕೇಳಲು ಸರಳ. ಆದರೆ ದೈನಂದಿನ ಜೀವನದಲ್ಲಿ ಸತ್ಯಪರತೆ, ಸಹಿಷ್ಣು, ಅಹಿಂಸಾತ್ಮಕ ನಡವಳಿಕೆಗಳು ಕಷ್ಟಸಾಧ್ಯ. ತತ್ವಶಾಸ್ತ್ರದ ಮೂಲವಾದ ಸತ್ಯಕ್ಕೆ ಗಾಂಧೀಜಿ ಆದ್ಯತೆ ನೀಡಿದ್ದಾರೆ. ಸತ್ಯವು ವ್ಯಕ್ತಿಯನ್ನು ಒಳಗಿನಿಂದ ಬಲಗೊಳಿಸಿದರೆ, ಸುಳ್ಳುಗಳು ವ್ಯಕ್ತಿಯನ್ನು ದುರ್ಬಲಗೊಳಿಸುತ್ತವೆ ಎಂದು ಗಾಂಧೀಜಿ ನಂಬಿದ್ದರು ಎಂದು .ಮೋಹನ್ ಹೇಳಿದರು.

ಪ್ರಾಂಶುಪಾಲ ಬಿ.ಪಿ.ಸುರೇಶ್ ಮಾತನಾಡಿದರು. ಪ್ರಾಧ್ಯಾಪಕರಾದ ಡಾ.ಎಚ್.ಜಿ.ಬೋರಯ್ಯ, ಐಕ್ಯೂಎಸಿ ಸಂಚಾಲಕ ಡಾ.ಬಸವರಾಜು, ಡಾ.ಸೀನಪ್ಪ, ಪ್ರೊ.ಆರ್.ಕವಿತಾ, ಡಾ.ಎಚ್.ಎಲ್.ಶೋಭಾ, ಡಾ.ದಿವಾಕರ್, ಕೆ.ಜಗದೀಶ್ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.