ಜಿಲ್ಲೆ

ಬೆಳಗಾವಿ ಅಧಿವೇಶನದಲ್ಲಿ ಗಮನ ಸೆಳೆದ ಗಾಂಧಿ ವೇಷಧಾರಿಗಳು

Dharwada - Basavaraj Idli

ಹುಬ್ಬಳ್ಳಿ: ಬೆಳಗಾವಿಯಲ್ಲಿ ಜರುಗಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ನೂರು ಜನ ಗಾಂಧಿ ವೇಷಧಾರಿ ಮಕ್ಕಳು ಗಮನ ಸೆಳೆದರು.

ಮಹಾತ್ಮ ಗಾಂಧೀಜಿ ವೇಷಧಾರಿಗಳು ಬೃಹತ್ ಸಮಾವೇಶದಲ್ಲಿ ಜನಮನ ಸೆಳೆದರು. ಅನೇಕ ಜನರು ಗಾಂಧಿ ತಾತನ ವೇಷ ಧರಿಸಿದ ಮಕ್ಕಳೊಂದಿಗೆ ಫೋಟೊ ತೆಗೆದುಕೊಂಡು ಖುಷಿ ಪಟ್ಟರು.

ಮಕ್ಕಳು ವೇದಿಕೆಗೆ ಬರುತ್ತಲೇ ಚಪ್ಪಾಳೆ ತಟ್ಟಿ ಹುರಿದುಂಬಿಸಿದರು. ಕಾಂಗ್ರೆಸ್ ನಾಯಕರು ಇವರಿಗೆ ಶುಭಾಶಯ ಕೋರಿದರು.

ಕೆಪಿಸಿಸಿ ವಕ್ತಾರ ಗಂಗಾಧರ ದೊಡವಾಡ ವೇಷಧಾರಿ ಮಕ್ಕಳ ನೇತೃತ್ವ ವಹಿಸಿ ಮಾರ್ಗದರ್ಶನ ಮಾಡಿದರು.

ಕಾಂಗ್ರೆಸ್ ನಾಯಕರಾದ ಅಶೋಕ ಪೂಜಾರ, ಶಾರುಕ್ ಮುಲ್ಲಾ, ರೇಷ್ಮಾ ತಾಜ್, ನವೀದ ಮುಲ್ಲಾ, ಶರೀಫ್ ಗರಗದ, ಸಿದ್ದೇಶ್ ಕಾರದ್ಕಟ್ಟಿ,  ಅನಿಲ್ ಬುನಿಯನ್ ಮುಂತಾದವರು ಉಪಸ್ಥಿತರಿದ್ದರು.