ಜಿಲ್ಲೆ

ಕೆ.ಆರ್.ಸಾಗರದ ಬೃಂದಾವನದಲ್ಲಿ ಗಾಂಧಿ ಜಯಂತಿ ಆಚರಣೆ

ನಾಗೇಶ ಎಸ್

ಕೆ.ಆರ್.ಸಾಗರ: ಕೆ.ಆರ್.ಸಾಗರ ವಿಭಾಗದ ಕಾವೇರಿ ನೀರಾವರಿ ನಿಗಮದಿಂದ ಮಹಾತ್ಮ ಗಾಂಧೀಜಿ ಜಯಂತಿ ಯನ್ನು ಬೃಂದಾವನದಲ್ಲಿ ಆಚರಣೆ ಮಾಡಲಾಯಿತು.

ಬೃಂದಾವನದಲ್ಲಿರುವ ಗಾಂಧೀಜಿ ಚಿತ್ರವಿರುವ ಕಾರಂಜಿಯ ಮುಂಭಾಗದಲ್ಲಿ ಗಾಂಧೀಜಿ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಲಾಯಿತು. ಕೆ.ಅರ್.ಸಾಗರ ಕಾವೇರಿ ನೀರಾವರಿ ನಿಗಮ ಸಹಾಯಕ ಕಾರ್ಯಪಾಲಕ ಅಭಿಯಂತರರದ ಫಾರೂಕು ಅಬು ಮತ್ತು ಕಿಶೋರ ಕುಮಾರ್ ಗಾಂಧೀಜಿಯ ಭಾವಚಿತ್ರಕ್ಕೆ ಪುಷ್ಪಗಳನ್ನು ಅರ್ಪಿಸಿದರು.

ಕಿಶೋರ್ ಕುಮಾರ್ ಮಾತನಾಡಿ, ನಾವು ಗಾಂಧೀಜಿ ತತ್ವಗಳನ್ನು ಅಳವಡಿಸಿಕೊಳ್ಳಬೇಕು. ಇಂದಿನ ಆಧುನಿಕ ಯುಗದಲ್ಲಿ ಯುವ ಪೀಳಿಗೆ ಗಾಂಧೀಜಿ ಸ್ಮರಿಸಲು ಮರೆಯುತ್ತಿದ್ದಾರೆ. ಗಾಂಧೀಜಿ ನಮ್ಮ ದೇಶಕ್ಕೆ ಸ್ವಾತಂತ್ರೃಕ್ಕೆ ಹೋರಾಟ ಮಾಡಿದ ದಿನಗಳ ಬಗ್ಗೆ ನಮ್ಮ ಮುಂದಿನ ಪೀಳಿಗೆ ತಿಳಿಸಬೇಕಾಗಿದೆ ಎಂದರು.

ಕೆ.ಆರ್.ಸಾಗರ ಯೋಜನೆ ಶಾಖೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಪ್ಪ, ಖಜಾಂಚಿ ನಾಗೇಶ್, ಕಾವೇರಿ ನೀರಾವರಿ ನಿಗಮದ ಇಂಜಿನಿಯರ್‌ಗಳಾದ ಅಭಿಲಾಷ್, ಶಿವಕುಮಾರ್ ಸಿಬ್ಬಂದಿಗಳು ರಿಜ್ವಾನ್, ಶಿವಕುಮಾರ್, ಮದನ್ ಇತರರಿದ್ದರು.