ಜಿಲ್ಲೆ

ವಿವಿಧ ಗ್ರಾಮಗಳಿಗೆ ಗಾಂಧಿ ಗ್ರಾಮ ಪುರಸ್ಕಾರ

Vijayanagara - Veerendra

ಹೊಸಪೇಟೆ: ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದಿಂದ ನೀಡಲಾಗುವ ೨೦೨೨ -೨೩ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಜಿಲ್ಲೆಯ ಆರು ಗ್ರಾಮಗಳು ಆಯ್ಕೆಯಾಗಿವೆ.

ಹೊಸಪೇಟೆ ತಾಲೂಕಿನ ಡಣನಾಯಕನಕೆರೆ, ಎಚ್.ಬಿ. ಹಳ್ಳಿಯ ಬಾಚಿಗೊಂಡನಹಳ್ಳಿ, ಕೂಡ್ಲಿಗಿಯ ಗುಡೇಕೋಟೆ, ಹರಪನಹಳ್ಳಿ ಯ ದುಗ್ಗಾವತಿ ಮತ್ತು ಕೊಟ್ಟೂರು ತಾಲೂಕಿನ ಹ್ಯಾಳ್ಯಾ ಗ್ರಾಮಕ್ಕೆ ಪುರಸ್ಕಾರ ಲಭಿಸಿದೆ. ಅ.೨ ರಂದು ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಏರ್ಪಡಿಸಿರುವ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ರಾಜ್ಯ ಪಂಚಾಯತ್ ರಾಜ್ ಆಯುಕ್ತಾಲಯದ ಪ್ರಕಟಣೆ ತಿಳಿಸಿದೆ.