ಜಿಲ್ಲೆ

ಕವಿವಿಯಲ್ಲಿ ಗಾಂಽ ಭಾರತ ವಿಚಾರ ಸಂಕಿರಣ

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡವ

ಮಹಾತ್ಮಾ ಗಾಂಧೀಜಿಯವರ 77ನೇ ಪುಣ್ಯಸ್ಮರಣೆ ಪ್ರಯುಕ್ತ ಗಾ೦ಧಿ ಶಾಂತಿ ಪ್ರತಿಷ್ಠಾನ ಕೇಂದ್ರ, ಕರ್ನಾಟಕ ವಿಶ್ವವಿದ್ಯಾಲಯದ ಗಾ೦ಧಿ ಅಧ್ಯಯನ ವಿಭಾಗ, ರಾಷ್ಟಿçÃಯ ಸೇವಾ ಯೋಜನಾ ಕೋಶ ಹಾಗೂ ಪ್ರಾದೇಶಿಕ ಪತ್ರಾಗಾರ ಇಲಾಖೆ ಸಹಯೋಗದಲ್ಲಿ ಹುತಾತ್ಮರ ದಿನಾಚರಣೆ ಕಾರ್ಯಕ್ರಮಗಳನ್ನು ಜ. 30ರಂದು ಕವಿವಿ ಗಾ೦ಧಿ ಭವನದಲ್ಲಿ ಆಯೋಜಿಸಲಾಗಿದೆ.

ಬೆಳಗ್ಗೆ 10 ಗಂಟೆಗೆ ಮಾಲಾರ್ಪಣೆ ಹಾಗೂ ಸರ್ವಧರ್ಮ ಪ್ರಾರ್ಥನಾ ಸಭೆ ಜರುಗಲಿದೆ ಪ್ರಭಾರಿ ಕುಲಪತಿ ಪ್ರೊ. ಎಸ್. ಜಯಶ್ರೀ, ಕುಲಸಚಿವರಾದ ಡಾ. ಎ. ಚನ್ನಪ್ಪ, ಪ್ರೊ. ಎನ್.ವೈ. ಮಟ್ಟಿಹಾಳ, ವಿತ್ತಾಧಿಕಾರಿ ಪ್ರೊ. ಸಿ. ಕೃಷ್ಣಮೂರ್ತಿ ಅತಿಥಿಗಳಾಗಿ ಪಾಲ್ಗೊಳ್ಳುವರು. 11 ಗಂಟೆಗೆ ರಾಷ್ಟçದ ಸ್ವಾತಂತ್ರ‍್ಯಕ್ಕಾಗಿ ಪ್ರಾಣಾರ್ಪಣೆ ಮಾಡಿದ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು. ನಂತರ `ಗಾ೦ಧಿ ಭಾರತ ಮರು ನಿಮÁðಣ', ವಾರ್ತಾ ಇಲಾಖೆಯ ಪ್ರಕಟಣೆಗಳ ಬಿಡುಗಡೆ ಹಾಗೂ ಪ್ರಾದೇಶಿಕ ಪತ್ರಾಗಾರ ಇಲಾಖೆಯಿಂದ ಗಾಂಧೀಜಿಯವರ ಅಪರೂಪದ ಛಾಯಾಚಿತ್ರ ಪ್ರದರ್ಶನ ಇರಲಿದೆ.

ಬೆಳಗ್ಗೆ 11.30ಕ್ಕೆ ಗಾಂಧಿ ಭಾರತ ವರ್ಷಾಚರಣೆ ಸರಣಿ ಕಾರ್ಯಕ್ರಮದ ಅಂಗವಾಗಿ ಮಹಾತ್ಮಾ ಗಾಂಧೀಜಿ ಅಧ್ಯಕ್ಷತೆಯ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕುರಿತ ವಿಚಾರ ಸಂಕಿರಣ ಜರುಗಲಿದೆ. ಸಂಪನ್ಮೂಲ ವ್ಯಕ್ತಿಯಾಗಿ ಗಾ೦ಧಿ ಶಾಂತಿ ಪ್ರತಿಷ್ಠಾನ ಕೇಂದ್ರದ ಕಾರ್ಯದರ್ಶಿ ಬಸವಪ್ರಭು ಹೊಸಕೇರಿ, ಅತಿಥಿಗಳಾಗಿ ಹಿರಿಯ ಪತ್ರಕರ್ತ ಮನೋಜ ಪಾಟೀಲ, ಹಿರಿಯ ವೈದ್ಯ ಡಾ. ದಿಲೀಪ ದೇಶಪಾಂಡೆ, ಬಸವಶಾಂತಿ ಮಿಷನ್ ಅಧ್ಯಕ್ಷ ಮಹಾದೇವ ಹೊರಟ್ಟಿ, ಡಾ. ಶಿವಾನಂದ ಶೆಟ್ಟರ್, ಡಾ. ಎಂ.ಬಿ. ದಳಪತಿ, ಡಾ. ಎಸ್.ಬಿ. ಬಸೆಟ್ಟಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.