ಜಿಲ್ಲೆ

ಗಂಡಸಿಯಲ್ಲಿ ನೂರಾರುಭಕ್ತರ ಮಿಲನ- ರಥೋತ್ಸವ

ಗಂಡಸಿ : ಶ್ರೀ ದೊಡ್ಡಮ್ಮದೇವಿ ಹಾಗೂ ಶ್ರೀ ಚಿಕ್ಕಮ್ಮದೇವಿ ಮಹಾ ರಥೋತ್ಸವ ಸೋಮವಾರ ಗಂಡಸಿಯಲ್ಲಿ ಭಕ್ತರ ಹರ್ಷೋದ್ಘಾರ ನಡುವೆ ವಿಜೃಂಭಣೆಯಿಂದ ನೆರವೇರಿತು.ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ 4 ದಿನಗಳ ಕಾಲ ದೇವಾಲಯ ಆವರಣದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜಾ ಕೈಂಕರ್ಯ ನೆರವೇರಿತು. ರಥಕ್ಕೆ ಬಲಿಪ್ರದಾನ ಸೇರಿದಂತೆ ಇತರ ಧಾರ್ಮಿಕ ಪೂಜಾ ಕೈಂಕರ್ಯ ನಡೆಸಲಾಯಿತು. ಮಧ್ಯಾಹ್ನ 12 ಗಂಟೆಗೆ ದೊಡ್ಡಮ್ಮದೇವಿ, ಚಿಕ್ಕಮ್ಮದೇವಿಯ ಉತ್ಸವ ಮೂರ್ತಿ ಮತ್ತು ರಥವನ್ನು ವಿವಿಧ ಬಗೆಯ ಪುಷ್ವಗಳಿಂದ ಶೃಂಗರಿಸಲಾಗಿತ್ತು. ಬಳಿಕ ರಥದ ಮೇಲೆ ಉತ್ಸವ ಮೂರ್ತಿಗಳನ್ನು ಕೂರಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಅರೆವಾದ್ಯ, ಮಂಗಳವಾದ್ಯ ಸೋಮನ ಕುಣಿತದೊಂದಿಗೆ ಜಾತ್ರಾ ಮೈದಾನದಿಂದ ಶ್ರೀ ಆಂಜನೇಯ ದೇವಾಲಯವರೆಗೆ ನೂರಾರು ಭಕ್ತರು ರಥ ಎಳೆದರು. ಈ ಸಂದರ್ಭ ರಥಕ್ಕೆ ಬಾಳೆಹಣ್ಣು, ಧವನ ಎಸೆದರು. ರಥೋತ್ಸವದಲ್ಲಿ ರಾಜಕೀಯ, ಗ್ರಾಮದ ಮುಖಂಡರು, ಗುಡಿಗೌಡರು ಭಾಗವಹಿಸಿದ್ದರು.