Teacher teaching students in the classroom scene illustration 
ಜಿಲ್ಲೆ

ಗಂಡಸಿ ಹ್ಯಾಂಡ್‌ಪೋಸ್ಟ್ ಸರ್ಕಾರಿ ಶಾಲೆಗೆ ಶೇ.95.66

ಗಂಡಸಿ: ಗಂಡಸಿ ಹ್ಯಾಂಡ್‌ಪೋಸ್ಟ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.95.66 ರಷ್ಟು ಫಲಿತಾಂಶ ಪಡೆದಿದೆ.

ಒಟ್ಟು 23 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 22 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ಸಿ.ಎಂ.ಪ್ರಸನ್ನ ಕುಮಾರ್ ತಿಳಿಸಿದ್ದಾರೆ. ಅತ್ಯುನ್ನತ ಶ್ರೇಣಿಯಲ್ಲಿ 6 ವಿದ್ಯಾರ್ಥಿಗಳು, ಉನ್ನತ ಶ್ರೇಣಿಯಲ್ಲಿ 13 ವಿದ್ಯಾರ್ಥಿಗಳು, ದ್ವಿತೀಯ ಶ್ರೇಣಿಯಲ್ಲಿ 3 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಬಿಂದುಶ್ರೀ 580, ಎನ್.ನಿಶಾ 572 ಅಂಕ ಗಳಿಸುವ ಮೂಲಕ ಪ್ರೌಢಶಾಲಾ ವಿಭಾಗಕ್ಕೆ ಹಾಗೂ ಪಾಲಕರಿಗೆ ಕೀರ್ತಿ ತಂದಿದ್ದಾರೆ ಎಂದು ಹೇಳಿದ್ದಾರೆ.