ಜಿಲ್ಲೆ

ಗಣಪತಿ ಮೂರ್ತಿ ಪ್ರತಿಷ್ಠಾಪನೆ 6ರಂದು

ದಾಂಡೇಲಿ: ಜೆ.ಎನ್. ರಸ್ತೆಯ ಬಸ್ ನಿಲ್ದಾಣ ಹತ್ತಿರದ ಶ್ರೀ ವಿಘ್ನೕಶ್ವರ ವರ್ತಕರ ಗಣಪತಿ ದೇವಸ್ಥಾನದಲ್ಲಿ ಶ್ರೀ ಮಹಾಗಣಪತಿ ಮೂರ್ತಿ ಪ್ರತಿಷ್ಠಾಪನೆ ಸೆ. 6ರಂದು ಜರುಗಲಿದೆ. 5ರಂದು ಬೆಳಗ್ಗೆ 5 ಗಂಟೆಯಿಂದ ವಿವಿಧ ಹೋಮಗಳು ನೆರವೇರಲಿವೆ.

6ರಂದು ಬೆಳಗ್ಗೆ 9.30ರಿಂದ ಮೂರ್ತಿ ಪ್ರತಿಷ್ಠಾಪನೆ, ಮಹಾಪೂಜೆ, ಮಧ್ಯಾಹ್ನ 12.30 ಗಂಟೆಗೆ ಮಹಾ ಮಂಗಳಾರತಿ, ಮಹಾಪ್ರಸಾದ ನಡೆಯಲಿದೆ. ಬೆಳಗಾವಿಯ ಅರ್ಚಕ ರಂಗನಾಥ ಭಟ್ಟ ಕಾರ್ಯಕ್ರಮಗಳನ್ನು ನೆರವೇರಿಸಲಿದ್ದಾರೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.