ವಿಜಯವಾಣಿ ಸುದ್ದಿಜಾಲ ಮಡಿಕೇರಿ:
ಮಡಿಕೇರಿಯ ಶ್ರೀ ವಿದ್ಯಾ ವಿನಾಯಕ ಯುವಕ ಮಂಡಳಿ ವತಿಯಿಂದ 17 ನೇ ವರ್ಷದ ಅದ್ಧೂರಿ ಗಣೇಶೋತ್ಸವ ನೆರವೇರಿಸಲಾಯಿತು.
7 ದಿನಗಳ ಕಾಲ ಸಮಿತಿ ವತಿಯಿಂದ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಹಿನ್ನೆಲೆಯಲ್ಲಿ ಭಕ್ತಾದಿಗಳಿಗೆ ಅನ್ನ ಸಂತರ್ಪಣಾ ಕಾರ್ಯಕ್ರಮವನ್ನು ಹಮ್ಮಿಕೊಂಡು ಮಡಿಕೇರಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಬಳಿಕ ಓಂಕಾರೇಶ್ವರ ದೇವಾಲಯದ ಸಮೀಪವಿರುವ ಗೌರಿ ಕೆರೆಯಲ್ಲಿ ಶಾಸ್ತ್ರೋಕ್ತವಾಗಿ ಈಚೆಗೆ ಗಣಪತಿ ವಿಸರ್ಜಿಸಲಾಯಿತು. ಶಾಸಕ ಡಾ. ಮಂತರ್ ಗೌಡ ಭೇಟಿ ನೀಡಿ ಗಣಪತಿಯ ಆಶೀರ್ವಾದ ಪಡೆದುಕೊಂಡರು.
ಸಮಿತಿ ಅಧ್ಯಕ್ಷ ಗೌತಮ್, ಉಪಾಧ್ಯಕ್ಷ ಸಾಗರ್, ಕಾರ್ಯದರ್ಶಿ ಲೀಲೇಶ್, ಖಜಾಂಜಿ ಸಚಿನ್ ಹಾಗೂ ಸಮಿತಿ ಸದಸ್ಯರು ಈ ಸಂದರ್ಭ ಇದ್ದರು.