ಮೈಸೂರು: ಸ್ಟ್ಯಾನ್ಲಿ ಪಾರ್ಕರ್ ಸಂಗೀತ ಶಾಲೆ ವತಿಯಿಂದ ಜ.27ರಂದು ಸಂಜೆ 4 ಗಂಟೆಗೆ ನಗರದ ಕುವೆಂಪುನಗರದ ಗಾನಭಾರತಿ ವೀಣೆ ಶೇಷಣ್ಣ ಭವನದಲ್ಲಿ ‘ಡಾ.ವಿಷ್ಣುವರ್ಧನ್ ಚಲನಚಿತ್ರಗಳ ಸುಮಧುರ ಗೀತೆಗಳ ‘ಗಾನಾಮೃತ-7’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶಾಲೆಯ ಮುಖ್ಯಸ್ಥ ಸ್ಟ್ಯಾನ್ಲಿ ಪಾರ್ಕರ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಸುಮಾರು 50 ಗೀತೆಗಳನ್ನು ವಿವಿಧ ವೃತ್ತಿಯಲ್ಲಿರುವ ಹವ್ಯಾಸಿ ಗಾಯಕರು ಹಾಡಲಿದ್ದಾರೆ. ಎಲ್ಲರಿಗೂ ಉಚಿತ ಪ್ರವೇಶವಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.