ಮುದಗಲ್: ಕ್ರೀಡಾಕೂಟದಲ್ಲಿ ತೀರ್ಪುಗಾರರು ನೀಡುವ ನಿರ್ಣಯ ಉತ್ತಮ ಕ್ರೀಡಾಪಟುವಿನ ನಿರ್ಮಾಣಕ್ಕೆ ಕಾರಣವಾಗಲಿದೆ ಎಂದು ಲಿಂಗಸುಗೂರು ತಾಲೂಕು ಅಕ್ಷರ ದಾಸೋಹ ಅಧಿಕಾರಿ ನಾಗನಗೌಡ ಬಯ್ಯಪುರ ಹೇಳಿದರು.
ಮೇಗಳಪೇಟೆಯಲ್ಲಿ ಸಿಆರ್‌ಸಿ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಶುಕ್ರವಾರ ಮಾತನಾಡಿದರು. ವಿದ್ಯಾರ್ಥಿಗಳು ಕ್ರೀಡಾ ಮನೋಭಾವದಿಂದ ಮತ್ತು ಆತ್ಮಸಾಕ್ಷಿಯೊಂದಿಗೆ ಆಟ ಆಡಬೇಕು ಎಂದರು. ತಾಲೂಕ ದೈಹಿಕ ಶಿಕ್ಷಣಾಧಿಕಾರಿ ಚನ್ನಬಸಪ್ಪ ಮೇಟಿ ಮಾತನಾಡಿ, ಮಕ್ಕಳಲ್ಲಿ ಶಿಕ್ಷಣದೊಂದಿಗೆ ಕ್ರೀಡಾಸಕ್ತಿ ಬೆಳೆಸಲು ಕ್ರಿಡಾಕೂಟ ಏರ್ಪಡಿಸಲಾಗುತ್ತಿದೆ. ಕ್ರೀಡೆಗಳಿಗೆ ಸರ್ಕಾರ ಸಾಕಷ್ಟು ಪ್ರೋತ್ಸಾಹ ನೀಡುತ್ತಿದ್ದು. ಮುದಗಲ್ ಭಾಗದಲ್ಲಿ ಕ್ರಿಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯುವ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ ಎಂದರು.
ಪ್ರಮುಖರಾದ ಸುರೇಶ ಸೇಠ್ ಜಾಂಗಡ, ಗ್ಯಾನಪ್ಪಯ್ಯ, ಬಸವರಾಜ ಮಣ್ಣೂರು, ಅಮರೇಶಗೌಡ,ಕರಿಯಪ್ಪ, ರಹಿಮಾನ ಸಾಬ್, ಅಮರಪ್ಪ ಚಕ್ಲಿ, ಕರಿಯಪ್ಪ ಚಕ್ಲಿ ಇತರರು ಇದ್ದರು.