ಜಿಲ್ಲೆ

ಮಂಗಳೂರು ಜೂಜಾಟ 19 ಮಂದಿ ಬಂಧನ

ಹರೀಶ ಎಂ.

ಮಂಗಳೂರು: ನಗರದ ಬೆಂದೂರ್‌ವೆಲ್‌ನಲ್ಲಿ ನಡೆಯುತ್ತಿದ್ದ ಜೂಜಾಟ ಅಡ್ಡೆಗೆ ಅಪರಾಧ ಪತ್ತೆ ದಳದ ಪೊಲೀಸರು ದಾಳಿ ನಡೆಸಿ, 19 ಮಂದಿಯನ್ನು ಬಂಧಿಸಿದ್ದಾರೆ.


ಶ್ರೀನಿವಾಸ್, ಅಶೋಕ್ ಕುಮಾರ್, ಹರೀಶ್ ಪೂಜಾರಿ, ಮೊಹಮ್ಮದ್ ಇಸ್ಮಾಯಿಲ್, ಪುನೀತ್ ಕೆ.ರಾವ್, ನಿರೀಕ್ಷಿತ್, ಪ್ರದೀಪ್, ಶ್ರವಣ್ ಕುಮಾರ್, ಪ್ರದೀಪ್ ಸಾಲ್ಯಾನ್, ದೇವರಾಜ್ ಶೆಟ್ಟಿ, ಗಣೇಶ್ ಎಂ., ಚರಣ್ ಕುಮಾರ್, ಹುಸೈನ್ ಉಮರ್, ಸದಾಶಿವ, ಜಯಂತ್, ಮೊಹಮ್ಮದ್ ಶರೀಫ್, ವಿಜೀತ್, ಕೀರ್ತಿ, ಧೀರಜ್ ಬಂಧಿತರು.


ಬೆಂದೂರ್‌ವೆಲ್‌ನ ಜಂಕ್ಷನ್‌ನಲ್ಲಿರುವ ವಿನ್ನರ್ಸ್‌ ರಿಕ್ರಿಯೇಶನ್ ಕ್ಲಬ್‌ಗೆ ದಾಳಿ ನಡೆಸಿದಾಗ ಅಲ್ಲಿ ಜೂಜಾಟ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಆಟಕ್ಕೆ ಬಳಸಿದ್ದ 13,010 ರೂ. ಹಾಗೂ 52 ಇಸ್ಪೀಟು ಎಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಬಳಿಕ ಪ್ರಕರಣವನ್ನು ತನಿಖೆಗೆ ಕದ್ರಿ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.