ಕುಂದಗೋಳ: ತಾಲೂಕಿನ ರಟ್ಟಿಗೇರಿ ಗ್ರಾಮದ ಹೊರವಲಯದ ಹೊಲದ ರಸ್ತೆಯಲ್ಲಿ ಜೂಜು ಅಡ್ಡೆಯ ಮೇಲೆ ಪೋಲಿಸರು ದಾಳಿ ಮಾಡಿ ಆರು ಜನರನ್ನು ಬಂಧಿಸಿ 13 ಸಾವಿರ ರೂ. ವಶಪಡಿಸಿಕೊಂಡಿದ್ದಾರೆ.
ಗುಡಗೇರಿ ಗ್ರಾಮದ ಮಂಜುನಾಥ ಕತ್ತಿ ಮತ್ತು ನಾಗರಾಜ ಬೂದಿಹಾಳ, ಅತ್ತಿಗೇರಿಯ ನಿಸಾರಹ್ಮದ ಬಟಕುರ್ಕಿ, ಮಂಡಿಗನಾಳದ ಶಿವರೆಡ್ಡೆಪ್ಪ ತಿರಕಣ್ಣವರ ಹಾಗೂ ರಟ್ಟಿಗೇರಿ ಗ್ರಾಮದ ರಾಜು ಸೂರಣಗಿ, ಮಹೇಶ ತಳ್ಳಳ್ಳಿ ಬಂಧಿತರು.
ಗುಡಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.