ಜಿಲ್ಲೆ

ಇಂದು ಗಮಕ ವಾಚನ, ಸನ್ಮಾನ

ಗಿರೀಶ ಸಗರ

ವಿಜಯಪುರ : ಇಲ್ಲಿನ ಜ್ಞಾನ ಯೋಗಾಶ್ರಮದ ಬಳಿಯ ನೀಲಾ ನಗರದಲ್ಲಿರುವ ಜೀವನ ದೀಪ ಪಬ್ಲಿಕ್​ ಶಾಲೆಯಲ್ಲಿ ಆ. 28 ರಂದು ಬೆಳಗ್ಗೆ 11ಕ್ಕೆ ಗಮಕ&ವಾಚನ&ವ್ಯಾಖ್ಯಾನ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಜಿಲ್ಲಾ ಗಮಕ ಕಲಾ ಪರಿಷತ್ತು ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಜೀವನ ದೀಪ ಪಬ್ಲಿಕ್​ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಚಂದ್ರಶೇಖರ ಮೊಗೇರಾ ಅಧ್ಯಕ್ಷತೆ ವಹಿಸುವರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಗಮಕ ಕಲಾ ಪರಿಷತ್ತು ಉಪಾಧ್ಯಕ್ಷ ಡಿ.ಎಸ್​. ಪಾಟೀಲ ಆಗಮಿಸುವರು.

ಜಿಲ್ಲಾ ಗಮಕ ಕಲಾ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎಂ. ಪಾಟೀಲ "ಸೋಮೇಶ್ವರ ಶತಕಗಳು' ಕುರಿತ ಗಮಕ ವಾಚನ ಗಮಕ ವ್ಯಾಖ್ಯಾನ ಮಾಡುವರು.

ಜಿ ಶಿವಪುತ್ರ ಶಿವನಿಂಗಪ್ಪ ಇಂಡಿ ಹಾಗೂ ಹವ್ಯಾಸಿ ಬರಹಗಾರ ಶಿವಾಜಿ ಮೋರೆ ಹವ್ಯಾಸಿ ಅವರನ್ನು ಸನ್ಮಾನಿಸಲಾಗುವುದು ಎಂದು ಜಿಲ್ಲಾ ಗಮಕ ಕಲಾ ಪರಿಷತ್ತು ಜಿಲ್ಲಾಧ್ಯಕ್ಷ ಬಿ.ಎಂ. ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.