ಬೆಂಗಳೂರು: ಮರಾಠಿಗರ ಪ್ರಾಬಲ್ಯ, ಸಾಂಸ್ಕೃತಿಕ ಸಂಘರ್ಷ ಹಾಗೂ ಬ್ರಿಟಿಷರ ಪರತಂತ್ರದ ಬದುಕುತ್ತಿರುವ ಕಾಲಟ್ಟದಲ್ಲಿ ಕನ್ನಡ ಕಾದಂಬರಿಗಳ ಪಿತಾಮಹವೆಂದು ಕರೆಯುವ "ಗಳಗನಾಥರು' (ವೆಂಕಟೇಶ ಗಳಗನಾಥ), ಕನ್ನಡಿಗರನ್ನು ಬಡಿದೆಬ್ಬಿಸುವ ಕೆಲಸ ಮಾಡಿದ್ದರು ಎಂದು ಹಿರಿಯ ವಿಮರ್ಶಕ ಪ್ರೊ. ಮಲ್ಲೆಪುರಂ ಜಿ.ವೆಂಕಟೇಶ ಹೇಳಿದರು.
ಸಾವರ್ಕರ್ ಸಾಹಿತ್ಯ ಸಂಘ, ಸುಚಿತ್ರ ಫಿಲಂ ಸೊಸೈಟಿಯಲ್ಲಿ ಭಾನುವಾರ ಆಯೋಜಿಸಿದ್ದ "ವೀರ ಸಾವರ್ಕರ್ ರಾಷ್ಟ್ರೀಯ ಪ್ರಶಸ್ತಿ' ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ಪಾರದರ್ಶಕ ವ್ಯಕ್ತಿತ್ವ ಹೊಂದಿದ್ದ ಇವರು, ತಮ್ಮ ಜೀವನವನ್ನು ರಾಷ್ಟ್ರಕ್ಕಾಗಿ ಮುಡುಪುಟ್ಟಿದ್ದರು. ಹಾಗಾಗಿ, ಗಳಗನಾಥರ ವ್ಯಕ್ತಿತ್ವ, ಸಾಹಿತ್ಯ ಕುರಿತು ಯುವಜನಾಂಗಕ್ಕೆ ಪರಿಚಯಿಸುವ ಅಗತ್ಯವಿದೆ. ಬರಹಗಾರರಿದ್ದ ಇವರು ಪ್ರಕಾಶಕ ಸಹ ಆಗಿದ್ದವರು. ತಾವು ಬರೆದಿದ್ದ ಪುಸ್ತಕವನ್ನು ಮುದ್ರಣ ಮಾಡುತ್ತಿದ್ದರು. ನಾವೆಲ್ಲರೂ ಇವರ ಕಾದಂಬರಿಗಳನ್ನು ಓದುತ್ತಾ ಬೆಳೆದಿದ್ದವರು. ಬರೆವಣಿಗೆ ಸೂಜಿಗಲ್ಲುನಂತೆ ಸೆಳೆಯುತ್ತಿತ್ತು ಎಂದರು.
ಗಳಗನಾಥರ ಮತ್ತೊಬ್ಬ ಅವಾತರ ಬಾಬು ಕೃಷ್ಣಮೂರ್ತಿ. ರಾಷ್ಟ್ರೀಯತೆ, ಸಂತ ಪರಂಪರೆ ಬಗ್ಗೆ ಹೆಚ್ಚು ಬರೆದಿದ್ದಾರೆ. ರಾಷ್ಟ್ರೀಯ ಸಾಹಿತ್ಯವನ್ನು ಕನ್ನಡದಲ್ಲಿ ಹೆಚ್ಚು ಬರೆದವರು ಬಾಬು ಕೃಷ್ಣಮೂರ್ತಿ. ಪತ್ರಿಕಾ ಸಾಹಿತ್ಯದಲ್ಲೂ ತಮ್ಮ ನಿಲುವು ಬಿಟ್ಟಿಕೊಟ್ಟಿಲ್ಲ. ರಾಷ್ಟ್ರೀಯ ಸಾಹಿತ್ಯ ಉಜ್ವಲಗೊಳಿಸುವುದು, ಸಮೃದ್ಧಿಗೊಳಿಸಲು ಹಾಗೂ ಯುವಕರಲ್ಲಿ ರಾಷ್ಟೀಯತೆ ಬೀಜ ಬಿತ್ತನೆಗೆ ಗಳಗನಾಥರಂತೆ ಬಾಬು ಕೃಷ್ಣಮೂರ್ತಿ ಕೆಲಸ ಮಾಡುತ್ತಿದ್ದಾರೆ. ಗಳಗನಾಥರ ಸಾಹಿತ್ಯ ಮತ್ತು ಬಾಬು ಕೃಷ್ಣಮೂರ್ತಿ ಸಾಹಿತ್ಯ ಒಂದಕ್ಕೊಂದು ಸಾಮ್ಯತೆ ಇದೆ ಎಂದು ಮಲ್ಲೆಪುರಂ ಜಿ.ವೆಂಕಟೇಶ ಅಭಿಪ್ರಾಯಪಟ್ಟರು. ಲೇಖಕ ಡಾ.ಬಾಬು ಕೃಷ್ಣಮೂರ್ತಿಗೆ ವೀರ ಸಾವರ್ಕರ್ ರಾಷ್ಟ್ರೀಯ ಪ್ರಶಸ್ತಿ' ನೀಡಿ ಸನ್ಮಾನಿಸಲಾಯಿತು. ಸಾಹಿತಿ ಡಾ. ಎಸ್.ಆರ್.ಲೀಲಾ ಇದ್ದರು.
ಮಾಹಿತಿ ಯುದ್ಧ:
ಸಾಂಸ್ಕೃತಿಕ ಸ್ವಾತಂತ್ರ್ಯ ನಮ್ಮ ದೇಶ ಸಿದ್ಧವಾಗಿದೆ. ದೇಶದ ಸಾಂಸ್ಕೃತಿಕ ಪರಂಪರೆ ಸಹಿಸದ ಕೆಲ ದೇಶಗಳು ಮಾಹಿತಿ ಯುದ್ಧ ನಡೆಸುತ್ತಿವೆ. ದೇಶವನ್ನು ಹಾಳುಗೆಡವಲು ಅಮೆರಿಕಾ, ಚೀನಾದಂತಹ ದೇಶಗಳು ಇಲ್ಲಿನ ದೇಶ ವಿರೋಧಿಗಳಿಗೆ ಹಣ ಸಂದಾಯ ಮಾಡುತ್ತಿವೆ. ಈ ಬಗ್ಗೆ ಕೇಂದ್ರ ಸರ್ಕಾರ ಎಚ್ಚರ ವಹಿಸಬೇಕಿದೆ ಎಂದು ಲೇಖಕ ಡಾ.ಜಿ.ಬಿ.ಹರೀಶ್ ಹೇಳಿದರು.
ಎರಡು ವರ್ಷದಿಂದ "ವೀರ ಸಾವರ್ಕರ್-ಸಮಗ್ರ'ವನ್ನು ಕನ್ನಡಕ್ಕೆ ಹೊರತರುವ ಕೆಲಸವನ್ನು ಮಾಡುತ್ತಿದ್ದೇವೆ. 10 ಸಂಪುಟಗಳ ಪೈಕಿ ಈವರೆಗೆ ಸಂಪುಟ-1,2 ಮತ್ತು 6 ಲೋಕಾರ್ಪಣೆ ಮಾಡಲಾಗಿದೆ. ಒಂದೂವರೆ ವರ್ಷದಲ್ಲಿ ಉಳಿದ ಸಂಪುಟಗಳು ಕನ್ನಡದಲ್ಲಿ ಲಭ್ಯವಾಗಲಿವೆ. ಮುಂದಿನ ದಿನಗಳಲ್ಲಿ ಹೆಚ್ಚು ಸಾವರ್ಕರ್ ಗೋಷ್ಠಿ, ಅಧ್ಯಯನ, ಸಾಹಿತ್ಯ ಕಾರ್ಯಕ್ರಮ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಹರ್ಷ ಸಮೃದ್. ಪ್ರಕಾಶಕ.