ಜಿಲ್ಲೆ

ಅಂಗನವಾಡಿ ಸುತ್ತ ಸ್ವಚ್ಛತಾ ಅಭಿಯಾನ

ಗಜೇಂದ್ರಗಡ: ತಾಲೂಕಿನ ಗುಳಗುಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರುದ್ರಾಪುರ ಗ್ರಾಮದ ಅಂಗನವಾಡಿ ಕೇಂದ್ರದ ಸುತ್ತ ಸ್ವಚ್ಛ ಅಭಿಯಾನದ ನಿಮಿತ್ತ ತಾಪಂ ಇಒ ಡಾ.ಡಿ. ಮೋಹನ್ ನೇತೃತ್ವದಲ್ಲಿ ಶ್ರಮದಾನ ಕೈಗೊಳ್ಳಲಾಯಿತು.
ಮುಳ್ಳುಕಂಟಿ, ಕಲ್ಲು, ಕಸ ಕಡ್ಡಿಕಟ್ಟಡದ ಸುತ್ತಲಿನ ಮುಳ್ಳುಕಂಟಿ, ಕಲ್ಲು, ಕಸ ಕಡ್ಡಿ, ಹುಲ್ಲು ಗಿಡಗಳ ತೆರವು, ರಸ್ತೆ, ಚರಂಡಿಯನ್ನು ಸ್ವಚ್ಛಗೊಳಿಸಲಾಯಿತು.
ಗ್ರಾಪಂ ಅಧ್ಯಕ್ಷ ಬಸವರಾಜ ಆದಿ, ಸದಸ್ಯ ನಾಗರಾಜ ಪಾಟೀಲ, ಶಿವು ರಾಜೂರು, ಶೇಖಪ್ಪ ಕುರಿ, ವಿರೂಪಾಕ್ಷಪ್ಪ ಶಿರಗುಂಪಿ, ಪಿಡಿಒ ಮಂಜುನಾಥ ಮೇಟಿ, ಸಿಬ್ಬಂದಿ ಮಂಜುನಾಥ ಹಳ್ಳದ, ಶಂಕರಗೌಡ ಪಾಟೀಲ, ಮಲ್ಲು ಉಪ್ಪಾರ, ಎಂ. ಮುತಾರಿ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು, ಯುವಕರು ಶ್ರಮದಾನದಲ್ಲಿ ಭಾಗವಹಿಸಿದ್ದರು.