ಲಿಂಗಸುಗೂರು : ಪಟ್ಟಣದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ರಾಯರ 354ನೇ ಆರಾಧನಾ ಮಹೋತ್ಸವ ಅಂಗವಾಗಿ ಭಾನುವಾರ ಸಂಜೆ ಗಜವಾಹನೋತ್ಸವ ಜರುಗಿತು.
ಅಲಂಕೃತ ಗಜವಾಹನದಲ್ಲಿ ಶ್ರೀರಾಮ, ಸೀತೆ, ಹನುಮಂತ ದೇವರ ಮೂರ್ತಿಗಳಿನ್ನಿಟ್ಟು ಪೂಜೆ ಸಲ್ಲಿಸಿ ಭಜನೆಯೊಂದಿಗೆ ಮಠದ ಸುತ್ತ ಪ್ರದಕ್ಷಿಣೆ ಹಾಕಲಾಯಿತು.
ಪಂ.ಜಯರಾಮಾಚಾರ್ಯ ಗರಗ, ಶೇಷಗಿರಿದಾಸ, ಕೃಷ್ಣಾಚಾರ ಗೋತಗಿ, ಗುರುರಾಜ ಮುತಾಲಿಕ ವಕೀಲ, ರಾಘವೇಂದ್ರ ಮುತಾಲಿಕ, ಮುರಳೀಧರ ಕುಲಕರ್ಣಿ, ಜನಾರ್ದನ ಜಹಗೀರದಾರ, ಪ್ರಾಣೇಶ ಜಾವೂರು, ಕೊಪ್ರೇಶ ಜೋಶಿ, ದತ್ತಾತ್ರೇಯ ಶಾಸ್ತ್ರಿ, ಅಶೋಕ ದಿಗ್ಗಾವಿ, ಅಡವಿರಾವ ದೇಸಾಯಿ, ಡಾ.ಆನಂದ ಆಪ್ಟೆ, ರವಿ ಕುಲಕರ್ಣಿ ಇತರರಿದ್ದರು.